Wednesday, May 18, 2022

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾಡಿದ ತಪ್ಪನ್ನು ಇಡೀ ರಾಜ್ಯ ನೋಡುತ್ತಿದೆ – ನಾರಾಯಣಗೌಡ

Must read

ಮಂಡ್ಯ: ಸರ್ವೋಚ್ಚ ನ್ಯಾಯಾಲಯವು ಉಪಚುನಾವಣೆಗೆ ತಡೆ ನೀಡಿರುವುದು ನನಗೆ ಸಂತೋಷ ತಂದಿದೆ ಎಂದು ಅನರ್ಹ ಶಾಸಕ ನಾರಾಯಣಗೌಡ ಅವರು ಗುರುವಾರ ಹೇಳಿದರು.

ನಗರದಲ್ಲಿಂದು 15 ಕ್ಷೇತ್ರಗಳ ಉಪಚುನಾವಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮಾತನಾಡಿದ ಅವರು, ನಾನು ಕೃಷ್ಣರಾಜಪೇಟೆ ತಾಲೂಕಿನ ಜನತೆಗೆ ಶಾಸಕ ಮಾತ್ರವಲ್ಲ ಒಬ್ಬ ಸೇವಕ, ನಮಗೆ ಸುಪ್ರೀಂ ಕೋರ್ಟ್​ನ ತೀರ್ಪಿನ ಮೇಲೆ ವಿಶ್ವಾಸವಿತ್ತು, ನಮ್ಮ ತಾಲೂಕಿನ ಜನ ನನಗೆ ಮಾಡಿರುವ ಆರ್ಶಿವಾದವನ್ನು ಅಷ್ಟು ಸುಲಭವಾಗಿ ಯಾರು ಕಿತ್ತಿಕೊಳಲು ಹಾಗುವುದಿಲ್ಲ ಎಂದು ಅವರು ಪರೋಕ್ಷವಾಗಿ ಸ್ಪೀಕರ್ ವಿರುದ್ಧ ಗುಡುಗಿದರು.

ನಾವು ಯಾವುದೇ ತಪ್ಪು ಮಾಡಿಲ್ಲ ಆದ್ರು ಅನರ್ಹ ಮಾಡಿದ್ರು, ಹೀಗಾಗಿ ನಮಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇತ್ತು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾಡಿರುವ ತಪ್ಪನ್ನು ಇಡಿ ರಾಜ್ಯ ಈಗ ಗಮನಿಸುತ್ತದೆ ಎಂದು ಅವರು ನುಡಿದರು.

ನಮ್ಮನ್ನು ಅನರ್ಹರು ಎಂದು ಘೋಷಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶುಭ ಹಾರೈಸುತ್ತೇನೆ. ನನ್ನದು ಏನಿದ್ದರೂ ಈಗ ಅಭಿವೃದ್ಧಿಯ ಮೂಲಮಂತ್ರ, ಕೆ.ಆರ್.ಪೇಟೆ ತಾಲೂಕಿನ ಸಮಗ್ರವಾದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದು ನಾರಾಯಣಗೌಡ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅಲ್ಲದೇ ರಾಜ್ಯದ ಎಲ್ಲಾ 15 ಶಾಸಕರಿಗೆ ಶುಭ ಸೂಚನೆ ದೊರೆತಿರುವ ಈ ಸಂದರ್ಭದಲ್ಲಿ ನಮ್ಮ ವಿರೋಧಿಗಳಿಗೂ ನಾನು ಶುಭವನ್ನೇ ಬಯಸುತ್ತೇನೆ. ಆಸೆ ಇದೆ ದುರಾಸೆ ಇಲ್ಲ ನನ್ನ ತಾಲೂಕು ನನಗೆ ಬಹಳ ಮುಖ್ಯ ಎಂದು ಅನರ್ಹ ಶಾಸಕ ನಾರಾಯಣಗೌಡ ಅವರು ಹೇಳಿದರು.

ಇದೇ ವೇಳೆಯಲ್ಲಿ ನಾರಾಯಣಗೌಡ ಅಭಿಮಾನಿಗಳು ಸುಪ್ರೀಂ ಕೋರ್ಟ್​ನ ತೀರ್ಪು ತಮ್ಮ ಪರ ಬಂದ ಹಿನ್ನಲೆಯಲ್ಲಿ ಸಿಹಿ ತಿಂಡಿ ತಿನಿಸುಗಳನ್ನು ನಾರಾಯಣಗೌಡ ಅವರಿಗೆ ತಿನ್ನಿಸುವುದರ ಮೂಲಕ ಸಂಭ್ರಮಾಚರಣೆ ಮಾಡಿದರು.

Latest article