Saturday, July 2, 2022

ಮಾಜಿ ಸಚಿವ ಡಿಕೆ ಶಿವಕುಮಾರ್​ ಅಪೋಲೋ ಆಸ್ಪತ್ರೆ ದಾಖಲು..!

Must read

ಬೆಂಗಳೂರು: ಮಾಜಿ ಶಾಸಕ ಡಿ. ಕೆ ಶಿವಕುಮಾರ್ ಅನಾರೋಗ್ಯ ಹಿನ್ನೆಲೆ ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿನ್ನೆ ರಾತ್ರಿ ರಕ್ತದೊತ್ತಡ ಹಾಗೂ ಬೆನ್ನು ನೋವಿನಿಂದ ಬಳಲಿದ ಹಿನ್ನೆಲೆ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದರು.ಈ ವೇಳೆ ಡಾ.ಶಂಕರ್ ಆಂಡ್ ಟೀಂ ಡಿಕೆಶಿಗೆ ಎರಡು ಗಂಟೆಗಳ ಕಾಲ ವಿವಿಧ ಟೆಸ್ಟ್ ಗಳನ್ನು ಮಾಡಿ ತಪಾಸಣೆ ನಡೆಸಿದರು.

.ಬಳಿಕ ಅನಾರೋಗ್ಯ ಉಲ್ಬಣಗೊಂಡ ಹಿನ್ನೆಲೆ ಡಿಕೆಶಿ ಅವರನ್ನು ಅಡ್ಮಿಟ್ ಮಾಡಿಕೊಳ್ಳಲಾಗಿದೆ. ಡಿಕೆಶಿ ಜೊತೆಗಾಗಮಿಸಿದ್ದ ಅವರ ಪತ್ನಿ ಉಷಾ ಹಾಗೂ ಪುತ್ರಿ ಐಶ್ವರ್ಯ ಡಿಕೆಶಿ ಅಡ್ಮಿಟ್ ಆದ ಬೆನ್ನಲ್ಲೇ ವಾಪಸ್ಸು ಮನೆಗೆ ತೆರಳಿದರು.

ಡಿಕೆಶಿವಕುಮಾರ್ ಅಡ್ಮಿಟ್ ಆದ ವಿಷಯ ತಿಳಿದು ಕುಣಿಗಲ್ ಎಂಎಲ್ ಎ ರಂಗನಾಥ್,ಶಾಸಕ ಕೃಷ್ಣಬೈರೆಗೌಡ ಮಾಜಿ ಶಾಸಕ ಬಾಲಕೃಷ್ಣ ಅಪೋಲೋ ಆಸ್ಪತ್ರೆಗೆ ಆಗಮಿಸಿ ಡಿಕೆಶಿ ಆರೋಗ್ಯ ವಿಚಾರಿಸಿದರು.

ಇದೇ ವೇಳೆ ಡಾ.ಶಂಕರ್ ಮಾದ್ಯಮಗಳಿಗೆ ಮಾಹಿತಿ ನೀಡಿ, ಡಿಕೆಶಿ ಅವರ ಆರೋಗ್ಯ ಸ್ಥಿತಿ ಏರುಪೇರಾಗಿದೆ. ನಾಳೆ ಅವರ ಆರೋಗ್ಯದ ಕುರಿತು ಹೆಲ್ತ್ ಬುಲ್ಲೆಟಿನ್ ಬಿಡುಗಡೆಗೊಳಿಸ್ತಿವಿ ಅಂತ ಹೇಳಿದ್ದಾರೆ.

Latest article