ವಿಜಯಪುರ: 6 ಇಲ್ಲಾ 8 ತಿಂಗಳಲ್ಲಿ ಮತ್ತೆ ಚುನಾವಣೆ ಎದುರಾಗಲಿದೆ. ಇಷ್ಟರಲ್ಲೆ ಚುನಾವಣೆ ಬರೋದು ಪಕ್ಕಾ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಮಂಗಳವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದ ದರ್ಬಾರ್ ಹೈಸ್ಕೂಲಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ವಿಜಯಪುರ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ತಿಳಿಸಿದರು.
ಇನ್ನೂ 2014 ರಿಂದ ದೊಡ್ಡ ಪ್ರಚಾರದ ಮೂಲಕ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿದ್ದಾರೆ. ಮೋದಿ ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕ್ತೀನಿ ಎಂದಿದ್ದರು, 15 ಪೈಸೆಯು ಜಮೆ ಆಗಿಲ್ಲ, ಸದ್ಯ ಜಿಎಸ್ಟಿಯಿಂದ ವ್ಯಾಪರಕ್ಕೆ ದೊಡ್ಡ ಪ್ರಮಾಣದ ನಷ್ಟವಾಗಿದೆ ಎಂದು ಎಂ ಬಿ ಪಾಟೀಲ್ ಇದೇ ವೇಳೆ ಹೇಳಿದರು.
ಬಿಜೆಪಿಯವರು ಪುಲ್ವಾಮಾ ಘಟನೆ ಇಟ್ಟುಕೊಂಡು ಚುನಾವಣೆ ಗೆದ್ದಿದ್ದಾರೆ. ಸದ್ಯದಲ್ಲೇ ಮೋದಿ ಸರ್ಕಾರದ ನಿಜ ಬಣ್ಣ ಇಷ್ಟರಲ್ಲೆ ಬಯಲಾಗಲಿದೆ. ಮೋದಿ ಸರ್ಕಾರ ಹೋಗಬೇಕು, ಜನ, ರೈತರ ಪರವಾದ ಸರ್ಕಾರ ಬರಬೇಕಿದೆ ಎಂದು ಎಂ. ಬಿ ಪಾಟೀಲ್ ವಾಗ್ದಾಳಿ ನಡೆಸಿದರು.