Tuesday, August 16, 2022

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿದ್ರು ಅಚ್ಚರಿ ಹೇಳಿಕೆ..!

Must read

ಚಿಕ್ಕೋಡಿ : ಮಾಜಿ ಸಿಎಂ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದರು. ನನ್ನ ಸರ್ಕಾರವನ್ನ ಕೆಡವಿ ಬಿಜೆಪಿಯವರು ಅಧಿಕಾರಕ್ಕೆ ಬಂದರು. ಹಾಗಂತ ನಾನು ಅವರ ಸರ್ಕಾರವನ್ನು ಕೆಡವೋದಿಲ್ಲ. ಹಾಗೆ ಮಾಡ್ತಾ ಕುಳಿತರೆ ನೆರೆ ಸಂತ್ರಸ್ತರನ್ನು ನೋಡೋವರು ಯಾರು ಅಂತಾ ಹೇಳಿಕೆ ನೀಡಿದರು.

ಯಾವಾಗ ಕುಮಾರಸ್ವಾಮಿ ಅವರ ಈ ಹೇಳಿಕೆ ಹೊರ ಬಿತ್ತೋ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಸಮರಕ್ಕೆ ಮುನ್ನುಡಿ ಬರೆದರು. 2006ರಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ನಡೆಸಿದವರು ಕುಮಾರಸ್ವಾಮಿ. ಅವರಿಂದ ಇನ್ನೇನು ಮಾಡಲು ಸಾಧ್ಯ..? ಹೆಚ್​ಡಿಕೆ ಹೇಳಿಕೆ ನೋಡಿದರೆ ಬಿಜೆಪಿಗೆ ಬೆಂಬಲಿಸ್ತಿದ್ದಾರೆ ಅನ್ಸುತ್ತೆ ಅಂತಾ ಟಾಂಗ್​ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಮಾತಿಂದ ಕೆರಳಿ ಕೆಂಡವಾದ ಕುಮಾರಸ್ವಾಮಿ, ನಾನು ಯಾರ ಹಂಗಿನಲ್ಲೂ ಇಲ್ಲ. ನಾನು ಇಂಥವರಿಗೆ ಬೆಂಬಲಕೊಡ್ತೀನಿ ಅಂತ ಯಾರಿಗೂ ಬರೆದುಕೊಟ್ಟಿಲ್ಲ. ಸರ್ಕಾರ ಬಿದ್ದು ಹೋಗಿ ಗೌರ್ನರ್ ರೂಲ್ ಬಂದರೆ ಜನರ ಗತಿ ಎನು. ಯಾವುದು ಸರ್ಕಾರ ಬಂದ್ರೇನು ಯಾರೇ ಸಿಎಂ ಆದ್ರೇನು. ಜರ ಹಿತ ಕಾಯೋದು ಮುಖ್ಯ. ನೀವು ಬದಾಮಿ ಬಿಟ್ಟು ಎಲ್ಲಿಗಾದ್ರೂ ಹೋಗಿದ್ದೀರಾ ಅಂತಾ ಟಾಂಗ್ ಕೊಟ್ಟಿದ್ದಾರೆ.

Latest article