Wednesday, May 18, 2022

ಮನೆಯಿಂದ ಹೊರಬಂದ್ರೆ ಮನುಷ್ಯರೇ ಸೀಜ್– ಜಿಲ್ಲಾಧಿಕಾರಿ ಎಚ್ಚರಿಕೆ

Must read

ವಿಜಯಪುರ: ಜಿಲ್ಲೆಯಲ್ಲಿ 21 ಕೊರೊನಾ ಕೇಸ್ ದೃಢ ಹಾಗೂ 2 ಈ ಮಹಾಮಾರಿ ಸೋಂಕಿಗೆ ಜೀವಹಾನಿಯಾಗಿದ್ದರಿಂದ ಲಾಕ್‍ಡೌನ್ ಇದ್ರೂ ಮನೆಯಿಂದ ಹೊರೊಬರುವವರಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಾಹನಗಳನ್ನ ಸೀಜ್ ಮಾಡುವ ರೀತಿಯಲ್ಲಿ ಅನಗತ್ಯ ಮನೆಯಿಂದ ಹೊರಗೆ ಬರುವವರನ್ನ ಸೀಜ್ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಇನ್ನು ಕೆಲವೊಂದಿಷ್ಟು ಏರಿಯಾದಲ್ಲಿ ರೆಡ್‍ಜೋನ್ ಇದೆ. ಇಂತಹದ್ರಲ್ಲಿ ವಿನಾಕಾರಣ ತಿರುಗಾಡಿದರೆ ಅಂತವರನ್ನ ವಶಕ್ಕೆ ಪಡೆದು ಕೊರೊಂಟೈನ್‍ನಲ್ಲಿ ಇಡುವುದಾಗಿ ಎಚ್ಚರಿಸಿದ್ದಾರೆ.

ಇಂದಿನಿಂದಲೇ ರೆಡ್ ಜೋನ್ ಏರಿಯಾ ಮೇಲೆ ಹದ್ದಿನ ಕಣ್ಣಿಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಅನಗತ್ಯ ತಿರುಗಾಡುವವರ ಕಂಡು ಬಂದರೆ ಮುಲಾಜಿಲ್ಲದೆ ಕೊರೊಂಟೈನ್ ಮಾಡಲಾಗುವುದು ಎಂದು ಹೇಳಿದರು.

Latest article