Sunday, October 2, 2022

ಮನೆಯಲ್ಲೇ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೌಕಾಪಡೆ ಅಧಿಕಾರಿ..!

Must read

ಕೊಡಗು: ಲಾಕ್‌ಡೌನ್ ಹಿನ್ನೆಲೆ ಕೊಡಗಿನಲ್ಲಿ ನೌಕಾಪಡೆ ಅಧಿಕಾರಿ ಸಿಂಪಲ್ ಆಗಿ ಕೊಡವ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಕಾರವಾರದಲ್ಲಿ ನೌಕಾಪಡೆ ಅಧಿಕಾರಿಯಾಗಿರೋ ಜಯಂತ್ ಸುಬ್ಬಯ್ಯ ಎಂಬುವರು ಮಡಿಕೇರಿ ತಾಲೂಕಿನ ಕಾಟಕೇರಿ ಮನೆಯಲ್ಲಿ ವಿವಾಹವಾಗಿದ್ದಾರೆ.

ಕುಂಚೆಟ್ಟಿರ ಉತ್ತಪ್ಪ ಪುತ್ರ ಜಯಂತ್ ರತ್ನ ಪೊಣ್ಣಯ್ಯ ಪುತ್ರಿ ಪ್ರಜ್ಞಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮೇ.10ರಂದು ನಿಶ್ಚಯವಾಗಿದ್ದ ವಿವಾಹಕ್ಕೆ 2 ಸಾವಿರ ಆಮಂತ್ರಣ ಪತ್ರಿಕೆ ಹಂಚಿದ್ದರು.

ಆದರೆ, ಲಾಕ್ ಡೌನ್ ಹಿನ್ನಲೆ ಮನೆಯಲ್ಲಿಯೇ ಕೊಡವ ಸಂಪ್ರದಾಯದಂತೆ ಸಿಂಪಲ್ ಮದುವೆ ನೆರವೇರಿದ್ದು, ಕುಟುಂಬಸ್ಥರು ವಾಲಗ ಶಬ್ಧಕ್ಕೆ ಭರ್ಜರಿ ಸ್ಟೆಪ್ ಹಾಕಿದ್ರು.

Latest article