Sunday, October 2, 2022

ಮಗು ಮಾರಿ ಮೊಬೈಲ್ ಖರೀದಿಸಿದ ಭೂಪ.!

Must read

ತಮಿಳುನಾಡು: ಕೂಲಿ ಕಾರ್ಮಿಕನೊಬ್ಬ ತನ್ನ ನವಜಾತ ಹೆಣ್ಣು ಶಿಶುವನ್ನು ಮಕ್ಕಳಾಗದ ದಂಪತಿಗೆ ಮಾರಿ ಚಿನ್ನ, ಮೊಬೈಲ್ ಖರೀದಿಸಿದ ಘಟನೆಯೊಂದು ತಮಿಳುನಾಡಿನ ಆರುಗಂಪಟ್ಟಿ ಗ್ರಾಮದಲ್ಲಿ ನಡೆದಿದೆ.

ಏಸುರಿ ಧಯರಾಜ್ ಎನ್ನುವವನ ಪತ್ನಿ ನವೆಂಬರ್ 8ರಂದು ಅವಳಿ ಗಂಡು-ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮೊದಲೇ ಹೆಣ್ಣು ಮಗುವಿದ್ದ ಕಾರಣಕ್ಕೆ ದಲ್ಲಾಳಿಗಳ ಸಹಾಯದಿಂದ 1 ಲಕ್ಷ 80 ಸಾವಿರಕ್ಕೆ ನವಜಾತ ಹೆಣ್ಣು ಶಿಶುವನ್ನು ಮಾರಿದ್ದಾನೆ.

ಇನ್ನು ಬಂದ ಹಣದಲ್ಲಿ 80ಸಾವಿರವನ್ನು ದಲ್ಲಾಳಿಗಳಿಗೆ ನೀಡಿ, ಉಳಿದ ಹಣದಲ್ಲಿ ಮೊಬೈಲ್, ಚಿನ್ನದ ಸರವನ್ನು ಖರೀದಿ ಮಾಡಿದ್ದಾರೆ. ಅಲ್ಲದೇ ಅಡ ಇಟ್ಟ ಬೈಕ್​ನ್ನು ಮರಳಿ ಬಿಡಿಸಿಕೊಂಡು ಬಂದಿದ್ದಾನೆ.

ಪತಿಯ ನಡವಳಿಕೆಯನ್ನು ಸಂಶಯಗೊಂಡು ಪತ್ನಿಯು ಮಕ್ಕಳ ಸಹಾಯವಾಣಿಗೆ ಮಾಹಿತಿ ತಿಳಿಸಿದ್ದಾಳೆ. ಮಾಹಿತಿಯನ್ನು ಆಧಾರಿಸಿ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂಧಿಗಳು ಸ್ವತಃ ದೂರು ದಾಖಲಿಸಿಕೊಂಡು ಏಸುರಿ ಧಯರಾಜ್​ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Latest article