Wednesday, May 18, 2022

ಭಾರತೀಯ ಅಮೇರಿಕನ್ನರ ಜೊತೆ ದೀಪಾವಳಿ ಹಬ್ಬ ಆಚರಿಸಿದ ಅಮೇರಿಕಾ ಅಧ್ಯಕ್ಷ.!

Must read

ವಾಷಿಂಗ್ಟನ್‌: ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಭಾರತೀಯ ಅಮೇರಿಕನ್ನರು, ಭಾರತೀಯ ಮೂಲದ ಆಡಳಿತಾಧಿಕಾರಿಗಳು, ರಾಜತಾಂತ್ರಿಕ ಸಿಬ್ಬಂದಿಗಳು ಅವರು ಸೇರಿ ಭಾನುವಾರ ದೀಪಾವಳಿ ಹಬ್ಬ ಆಚರಿಸಿದರು.

ಶ್ವೇತಭವನದಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ದೀಪ ಬೆಳಗಿಸಿದ ಬಳಿಕ ಎಲ್ಲ ಭಾರತೀಯ ಅಮೇರಿಕನ್ನರಿಗೆ ದೀಪಾವಳಿಯ ಶುಭಾಶಯಗಳನ್ನು ಕೋರಿದರು.

ಅಮೆರಿಕ ಹಾಗೂ ಜಗತ್ತಿನಾದ್ಯಂತ ಇರುವ ಹಿಂದೂಗಳು, ಬೌದ್ಧರು, ಸಿಖ್ಖರು ಹಾಗೂ ಜೈನರು ಈ ಹಬ್ಬ ಆಚರಿಸುತ್ತಿದ್ದಾರೆ, ಅವರಿಗೆ ನನ್ನ ಶುಭಾಶಯಗಳು ಎಂದು ಹೇಳಿದ್ದಾರೆ. ಅಮೇರಿಕಾದಲ್ಲಿ ದೀಪಾವಳಿ ಆಚರಣೆಯು ಧಾರ್ಮಿಕ ಸ್ವಾತಂತ್ರ್ಯದ ಸಂಕೇತವಾಗಿದೆ ಎಂದು ಟ್ರಂಪ್ ಅವರು ಹೇಳಿದರು.

ನಮ್ಮ ಆಡಳಿತದಲ್ಲಿ ಧಾಮಿರ್ಕ ಸ್ವಾತಂತ್ರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು. ಇದೇ ವೇಳೆಯಲ್ಲಿ ಭಾರತೀಯ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Latest article