Wednesday, May 18, 2022

ಭಾರತಕ್ಕೀಗ ಹೊಸ ಭೂಪಟ: ಇಂದು ರಿಲೀಸ್‌ ಮಾಡಿದ ಗೃಹ ಸಚಿವಾಲಯ.!

Must read

ನವದೆಹಲಿ: ಜಮ್ಮು- ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಅಕ್ಟೋಬರ್ 31ರಂದು ಅಸ್ತಿತ್ವಕ್ಕೆ ಬಂದಿವೆ. ಹೀಗಾಗಿ ಭಾರತದ ನಕ್ಷೆಯೂ ಬದಲಾಗಿದೆ.

ಇಂದು ಕೇಂದ್ರ ಸರ್ಕಾರವು ಹೊಸ ಭೂಪಟ ಬಿಡುಗಡೆ ಮಾಡಿದ್ದು, ಕೇಂದ್ರಾಡಳಿತ ಪ್ರದೇಶಗಳಾಗುವುದಕ್ಕೂ ಮುನ್ನ ದೇಶದ ಒಟ್ಟು ರಾಜ್ಯಗಳ ಸಂಖ್ಯೆ 29 ಆಗಿತ್ತು. ಇದರಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಸಹ ಸೇರಿತ್ತು. ಒಟ್ಟು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 7 ಆಗಿತ್ತು. ಈಗ ರಾಜ್ಯಗಳ ಸಂಖ್ಯೆ 28ಕ್ಕೆ ಇಳಿಕೆಯಾಗಿದೆ. ಅಲ್ಲದೇ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9 ತಲುಪಿದೆ.

ಮೂರು ತಿಂಗಳ ಹಿಂದೆ ಸಂಸತ್ತು ಜಮ್ಮು-ಕಾಶ್ಮೀರ ಪುನರ್‌ ವಿಂಗಡಣೆ ಕಾಯ್ದೆ 2019 ಅಂಗೀಕರಿಸಿತ್ತು. ಅದರ ಅನ್ವಯ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳು ಕಾರ್ಯಾರಂಭ ಮಾಡಿದ್ದು, ಹೊಸ ಭೂಪಟದಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಪ್ರದೇಶಗಳೂ ಸೇರಿಕೊಂಡಿವೆ.

Latest article