Tuesday, August 16, 2022

'ಭವಿಷ್ಯದಲ್ಲಿ ಇದು ಯಾರಿಗೂ ಮರುಕಳಿಸದಿರಲಿ ಅನ್ನೋದು ನನ್ನ ಆಶಯ'

Must read

ಬೆಂಗಳೂರು: ಗೀತಾ ಸಿನಿಮಾ ವಿವಾದಕ್ಕೆ ನಟಿ ಶಾನ್ವಿ ಶ್ರೀವಾಸ್ತವ್ ಇತಿಶ್ರೀ ಹಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೇಸರದಿಂದ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದಿದ್ದ ನಟಿ ಶಾನ್ವಿ ಶ್ರೀವಾಸ್ತವ್ , ಅಭಿಮಾನಿಗಳ ಕನ್‌ಫ್ಯೂಷನ್‌ಗೆ ಕಾರಣರಾಗಿದ್ರು.

ಆದ್ರೆ ಮೊನ್ನೆ ಗೀತಾ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಶಾನ್ವಿ ಬೇಸರಕ್ಕೆ ಕಾರಣ ತಿಳಿದು ಬಂದಿತ್ತು. ಗೀತಾ ಚಿತ್ರದಲ್ಲಿ ಶಾನ್ವಿ ಅಭಿನಯಸಿದ್ದ ಹಾಡೊಂದನ್ನ ಕಟ್ ಮಾಡಲಾಗಿತ್ತು. ಆದ್ರೆ ಶಾನ್ವಿಗೆ ಈ ವಿಷಯ ತಿಳಿಸಿರಲಿಲ್ಲ. ಈ ಕಾರಣಕ್ಕೆ ಶಾನ್ವಿ ಬೇಜಾರಾಗಿದ್ದರು.

ಇನ್ನು ಇಂದು ಶಾನ್ವಿ ಈ ಬಗ್ಗೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ. ನಿರ್ಮಾಪಕರಾದ ಸಯ್ಯದ್ ಸಲಾಂ ನನ್ನ ದುಗುಡ ಅರ್ಥ ಮಾಡಿಕೊಂಡಿದ್ದು ಸಂತಸದ ವಿಷಯ. ಚಿತ್ರಕ್ಕೆ ಏನು ಅವಶ್ಯಕ ಅನ್ನೋದು ಚಿತ್ರತಂಡದ ವಿವೇಚನೆಗೆ ಬಿಟ್ಟ ವಿಚಾರ. ಆದರೆ ಬದಲಾವಣೆಯ ಮಾಹಿತಿಯನ್ನ ಎಲ್ಲರಿಗೂ ತಿಳಿಸುವುದು ನಿಮ್ಮ ಕರ್ತವ್ಯ. ಗೀತಾ ಸಿನಿಮಾ ನಿಮ್ಮಂತೆ ನನಗೂ ಹೆಮ್ಮೆಯ ವಿಷಯ. ನನ್ನ ಮಾತು ಈ ಚಿತ್ರಕ್ಕಷ್ಟೆ ಅಲ್ಲ, ಹಲವು ಸನ್ನಿವೇಶಗಳ ಪ್ರತೀಕವಾಗಿ ಹೊರಬಂತು. ಇದು ನಮ್ಮಂತಹ ನಟ ನಟಿಯರನ್ನ ಕಾಡುವ ವಿಚಾರ. ಭವಿಷ್ಯದಲ್ಲಿ ಇದು ಯಾರಿಗೂ ಮರುಕಳಿಸದಿರಲಿ ಅನ್ನೋದು ನನ್ನ ಆಶಯ ಎಂದು ಶಾನ್ವಿ ಧನ್ಯವಾದ ತಿಳಿಸಿದ್ದಾರೆ.

Latest article