Wednesday, May 18, 2022

ಬೈಕ್​ ಸವಾರರೇ ಎಚ್ಚರ…! ಇದೆಂತಾ ವಿಚಿತ್ರ ಟ್ರಾಫಿಕ್ ಫೈನ್ ಗೊತ್ತಾ.?

Must read

ಮಂಗಳೂರು: ಹೆಲ್ಮೆಟ್ ಧರಿಸದ ಬೈಕ್ ಸವಾರನೋರ್ವ ಪೊಲೀಸರನ್ನು ಕಂಡೊಡನೆ ಹಿಂಬದಿ ಸವಾರನನ್ನು ಇಳಿಸಿ ತೆರಳಿದ್ದು, ಈ ವೇಳೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ತಡೆಹಿಡಿದ ಪೊಲೀಸರು 500 ರೂ. ದಂಡ ವಿಧಿಸಿದ ವಿಚಿತ್ರ ಘಟನೆ ದ.ಕ. ಜಿಲ್ಲೆಯ ಕಡಬದಲ್ಲಿ ನಡೆದಿದೆ.

ಈ ಸಮಯದಲ್ಲಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ದಂಡದ ರಶೀದಿಯನ್ನು ಹಿಂಪಡೆದಿದ್ದಾರೆ.

ಕಡಬದಲ್ಲಿ ಗೃಹಪ್ರವೇಶಕ್ಕೆಂದು ಕಾಸರಗೋಡಿನಿಂದ ಆಗಮಿಸಿದ್ದ ಯುವಕನನ್ನು ಬಸ್ಸು ನಿಲ್ದಾಣದವರೆಗೆ ಬಿಡಲೆಂದು ಯುವಕನೋರ್ವ ಹೆಲ್ಮೆಟ್ ಧರಿಸದೆ ಕಡಬಕ್ಕೆ ಆಗಮಿಸಿದ್ದು, ಈ ವೇಳೆ ಕಡಬದ ಕಾಲೇಜು ಕ್ರಾಸ್ ಬಳಿ ವಾಹನ ನಿಂತಿರುವುದನ್ನು ಗಮನಿಸಿದ ಬೈಕ್ ಸವಾರ ಹಿಂಬದಿ ಸವಾರನನ್ನು ಅಲ್ಲೇ ಇಳಿಸಿ ತೆರಳಿದ್ದಾನೆ ಎನ್ನಲಾಗಿದೆ.

ಇದನ್ನು ಗಮನಿಸಿದ ಪೊಲೀಸ್ ವಾಹನದ ಸಿಬ್ಬಂದಿ ಬೈಕಿನಿಂದ ಇಳಿದ ಯುವಕನನ್ನು ಅವ್ಯಾಚ ಶಬ್ದಗಳಿಂದ ಕರೆದು, ಸವಾರ ಹೆಲ್ಮೆಟ್ ಧರಿಸಿಲ್ಲ ಎಂದು ಆರೋಪಿಸಿ 500 ರೂ. ದಂಡ ವಿಧಿಸಿ ರಶೀದಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನ ಪ್ರಶ್ನಿಸಿದ ಪೊಲೀಸರೊಂದಿಗೆ ಸಾರ್ವಜನಿಕರು ತಗಾದೆ ತೆಗೆದಿದ್ದು, ಸ್ವಲ್ಪ ಮಟ್ಟಿಗೆ ಗೊಂದಲಕ್ಕೆ ಎಡೆಮಾಡಿತ್ತು.

Latest article