Wednesday, May 18, 2022

ಬೇರೆ ದೇಶದಲ್ಲಿ ಕೆಲಸ ಮಾಡಿ, ಮಾತೃ ಭೂಮಿ-ಭಾಷೆ ಎಂದಿಗೂ ಮರೆಯಬೇಡಿ – ವೆಂಕಯ್ಯ ನಾಯ್ಡು

Must read

ಮೈಸೂರು: ಎಲ್ಲರು ಯೋಗ ಮಾಡಿ. ಯೋಗ ಮಾಡುವುದರಿಂದ ಎಲ್ಲ ರೋಗವನ್ನು ದೂರ ಮಾಡಬಹುದು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.

ನಗರದಲ್ಲಿಂದು ಜೆಎಸ್​ಎಸ್​ ಉನ್ನತ ಶಿಕ್ಷಣ, ಸಂಶೋಧನಾ ಅಕಾಡೆಮಿ ಘಟಿಕೋತ್ಸವನ್ನು ಉದ್ದೇಶಿಸಿ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಅವರು, ಯೋಗ ಮಾಡುವುದರ ಜೊತೆಗೆ ಸರಿಯಾದ ಆಹಾರ ಪದ್ದತಿ ಇಟ್ಟುಕೊಳ್ಳಿ. ಈ ಮೂಲಕ ದೇಹವನ್ನು ಚೆನ್ನಾಗಿ ಇಟ್ಟಿಕೊಳ್ಳಬಹುದು. ಕರ್ನಾಟಕದಲ್ಲಿ ಒಳ್ಳೆ ಆಹಾರಗಳಿದೆ. ರಾಗಿ ಮುದ್ದೆ, ನೀರ್ ದೋಸೆಯಂತ ತಿಂಡಿಗಳಿದೆ ಎಂದರು.

ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುಂಬಾ ಸಂತೋಷ ತಂದಿದೆ. ಶಿಕ್ಷಣ ಮುಗಿಸಿ ದೇಶದಲ್ಲೆ ಸೇವೆ ಸಲ್ಲಿಸಿ ಎಂದು ಹೇಳುತ್ತಿದ್ದೀವಿ, ಆದರೆ ಈಗ ದೇಶದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಬೇಕಾದರೆ ಬೇರೆ ದೇಶದಲ್ಲಿ ಕೆಲಸ ಮಾಡಿ. ಆದರೆ ಮಾತೃ ಭೂಮಿಯನ್ನು, ಮಾತೃಭಾಷೆ ಮರೆಯಬೇಡಿ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು

Latest article