ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರವಾಗಿ ವಸತಿ ಸಚಿವ ವಿ. ಸೋಮಣ್ಣ ಪ್ರಚಾರ ನಡೆಸಿದರು. ಕ್ಷೇತ್ರದ ನೇಕಾರ ಸಮುದಾಯದ ಮತದಾರರ ಜತೆ ಸೋಮಣ್ಣ ಮತ್ತು ಅಭ್ಯರ್ಥಿ ಗೋಪಾಲಯ್ಯ ಸಭೆ ನಡೆಸಿದರು.
ನೇಕಾರ ಸಮುದಾಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಕೊಡುಗೆಯ ಬಗ್ಗೆ ಸೋಮಣ್ಣ ಗುಣಗಾನ ಮಾಡಿದರು. ನೇಕಾರರ ಸಾಲವನ್ನು ಸಿಎಂ ಮನ್ನಾ ಮಾಡಿದ್ದಾರೆ. ಅವರಿಗೆ ಮನೆ ಕಟ್ಟಿಸಿಕೊಡುವ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಅವರು ಹೇಳಿದರು.
ಈ ಬಾರಿ ಕೆ. ಗೋಪಾಯಯ್ಯ ಅವರು ಕಮಲದ ಅಭ್ಯರ್ಥಿಯಾಗಿದ್ದಾರೆ. ಅವರನ್ನು ಗೆಲ್ಲಿಸುವಂತೆ ವಿ. ಸೋಮಣ್ಣ ಅವರು ಈ ವೇಳೆ ಮನವಿ ಮಾಡಿದರು.