Wednesday, May 18, 2022

ಬಾಂಗ್ಲಾ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಕ್ಯಾಪ್ಟನ್​​ ಕೊಹ್ಲಿಗೆ ವಿಶ್ರಾಂತಿ, ಶರ್ಮಾಗೆ ಮಣೆ..!

Must read

ಮುಂಬೈ: ನವೆಂಬರ್​​ 3ರಿಂದ ಆರಂಭವಾಗಲಿರುವ ಬಾಂಗ್ಲಾ ವಿರುದ್ಧದ ಟೆಸ್ಟ್​ ಹಾಗೂ ಟಿ20 ಸರಣಿಗೆ ಟೀಮ್ ಇಂಡಿಯಾದ ಆಟಗಾರರನ್ನು ಪ್ರಕಟಿಸಲಾಗಿದೆ. ಟಿ-ಟ್ವೆಂಟಿ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿರುವುರಿಂದ ರೋಹಿತ್ ಶರ್ಮಾ ಅವರ ಸಾರಥ್ಯದಲ್ಲಿ ಬಾಂಗ್ಲಾವನ್ನು ಎದುರಿಸಬೇಕಾಗಿದೆ.

ಬಾಂಗ್ಲಾ ವಿರುದ್ಧ 3 ಟಿ-ಟ್ವೆಂಟಿ, 2 ಟೆಸ್ಟ್ ಪಂದ್ಯ ಇದ್ದು ಕ್ರೀಕೆಟ್​ ಆಯ್ಕೆ ಸಮಿತಿಯು ಟಿ-ಟ್ವೆಂಟಿ ಸರಣಿಗೆ – ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್​, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಬ್ ಪಂತ್, ವಾಷಿಂಗ್​ಟನ್ ಸುಂದರ್, ಕೃನಾಲ್ ಪಾಂಡ್ಯಾ, ಯಜುವೇಂದ್ರ ಚಹಲ್, ರಾಹುಲ್ ಚಹರ್, ದೀಪಕ್ ಚಹರ್, ಕಲೀಲ್​ ಅಹ್ಮದ್, ಶಿವಂ ದುಬೆ, ಶಾರ್ದಲ್ ಠಾಕೂರ್ ಅವರನ್ನು ಆಯ್ಕೆಮಾಡಿದೆ.

ಟೆಸ್ಟ್​ ಸರಣಿಗೆ – ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್​ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ಹನುಮ್ ವಿಹಾರಿ, ವೃದ್ಧಿಮನ್ ಸಹಾ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಕುಲದೀಪ್ ಯಾದವ್, ಮಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶುಭಮನ್ ಗಿಲ್, ರಿಷಬ್ ಪಂತ್ ಅವರನ್ನು ಕ್ರೀಕೆಟ್​ ಆಯ್ಕೆ ಸಮಿತಿಯು ಆಯ್ಕೆಮಾಡಿದೆ.

Latest article