ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ತಮ್ಮ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಂದ ಪ್ರೈವೇಟ್ ಬಸ್ಗಳು ಸುಲಿಗೆ ಮಾಡುತ್ತಿದ್ದಾರೆ. ದೂರದ ಊರಿಗೆ ಜನ ತೆರಳಲು ಸಿದ್ದರಾಗಿದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಸ್ ಮಾಲೀಕರು ಹೆಚ್ಚಿನ ಪ್ರಯಾಣ ದರ ವಿಧಿಸಿ ಅಟ್ಟಹಾಸ ಮೆರೆಯುತ್ತಿದ್ದಾರೆ. ದೀಪದ ಹಬ್ಬದ ಪ್ರಯಾಣಿಕರಿಗೆ ದರ ಏರಿಕೆ ಶಾಕ್ ನೀಡಿರೋದು ಅಕ್ರೋಶಕ್ಕೆ ಕಾರಣವಾಗಿದೆ. ಪ್ರಯಾಣಿಕರೊಬ್ಬರು, ಸಿಎಂಗೆ ದುಬಾರಿ ಬೆಲೆಯ ಟಿಕೆಟ್ ನೀಡಿ ಪ್ರತಿಭಟಿಸಿರುವ ಘಟನೆ ನಡೆದಿದೆ.
ಹಬ್ಬ ಬಂದರೆ ಸಾಕು, ಕೇವಲ ಹಣ್ಣು-ಹೂವು, ತರಕಾರಿಗಳ ಇತ್ಯಾದಿ ಬೆಲೆಯಷ್ಟೇ ಅಲ್ಲ, ಸಾವರ್ಜನಿಕರು ಪ್ರಯಣ ಮಾಡುವ ಬಸ್ ಟಿಕೆಟ್ ದರವೂ ದುಪ್ಪಟ್ಟಾಗುತ್ತದೆ. ಹಬ್ಬ-ಹರಿದಿನಗಳನ್ನೇ ಬಂಡವಾಳ ಮಾಡಿಕೊಳ್ಳುವ ಖಾಸಗಿ ಬಸ್ ಏಜೆನ್ಸಿಗಳು, ಟಿಕೆಟ್ ದರವನ್ನು ಇದ್ದಕ್ಕಿದಂತೆ ದುಪ್ಪಟ್ಟು ಮಾಡುತ್ತವೆ/ಮಾಡಿವೆ. ಇದರಿಂದ ಬೇಸತ್ತ ಪ್ರಯಾಣಿಕನೊಬ್ಬರು ಮುಖ್ಯಮಂತ್ರಿಗೆ ಟಿಕೆಟ್ ಕಾಯ್ದಿರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಧ ಭಾಗಗಳಿಂದ ಬೆಂಗಳೂರಿನಲ್ಲಿ ಬಂದು ನೆಲೆಸಿರುವ ವಲಸಿಗರು, ಹಬ್ಬಗಳಿಗೆ ತಮ್ಮ-ತಮ್ಮ ಊರುಗಳಿಗೆ ಹೋಗುತ್ತಾರೆ. ಆದರೆ, ಬಸ್ಗಳ ಪ್ರಯಾಣ ದರ ದುಪ್ಪಟ್ಟವಾಗಿರುವ ಬೆಳವಣಿಗೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಯಾಣಿಕನೊಬ್ಬರು ವಿಭಿನ್ನವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರೀತಿಯ ಯಡಿಯೂರಪ್ಪ ಅವರಿಗೆ ಹೊನ್ನಾವರ ತಾಲ್ಲೂಕಿನ ಗುಂಡಬಾಳಕ್ಕೆ ಸ್ವಾಗತ. ಇದು ದೀಪಾವಳಿ ಹಬ್ಬಕ್ಕೆ ನಿಮಗೆ ಆಮಂತ್ರಣ. ದುಬಾರಿ ಬೆಲೆಯ ಖಾಸಗಿ ಟಿಕೆಟ್ ನಿಮಗಾಗಿ ಅಂತ ರಾಜೇಶ್ ಸೇಟ್ ಎಂಬುವವರು ಸಿಎಂಗೆ ಟಿಕೆಟ್ ಬುಕ್ ಮಾಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದಕ್ಕೆ ಸಾರ್ವಜನಿಕರೂ ಕೂಡ ಸಾಥ್ ನೀಡಿದ್ದಾರೆ.
ಇನ್ನು ಕೇವಲ ಖಾಸಗಿ ಬಸ್ಗಳಷ್ಟೇ ಅಲ್ಲ, ಹಬ್ಬಕ್ಕೆ ಅಂತ ವಿಶೇಷವಾಗಿ ಸೇವೆ ನೀಡುತ್ತಿರುವ, ಕೆಎಸ್ಆರ್ಟಿಸಿ ಬಸ್ಗಳಲ್ಲೂ ಶೇ.20 ರಿಂದ 25 ರಷ್ಟು ಟಿಕೆಟ್ ದರ ಕೂಡ ಹೆಚ್ಚಳವಾಗಿದೆ. ಇನ್ನೂ ಯಾಕ್ ಸಾರ್ ಹೀಗೆ ಅಂತ ಸಾರಿಗೆ ಸಚಿವರನ್ನು ಪ್ರಶ್ನೆ ಮಾಡಲಾಗಿದೆ.
ಪ್ರೀತಿಯ @BSYBJP , @CMofKarnataka ನವರಿಗೆ ಉ.ಕ. ಜಿಲ್ಲೆಯ ಹೊನ್ನಾವರ ತಾಲೂಕು ಗುಂಡಬಾಳಕ್ಕೆ ದೀಪಾವಳಿಯ ಆಮಂತ್ರಣ.
ಹಬ್ಬ, ರಜಾ ದಿನಗಳಲ್ಲಿ ಯಾವುದೇ ಮಿತಿ ಇಲ್ಲದೆ ಪ್ರಯಾಣಿಕರ ಮೇಲೆ ಹೊರೆಯಾಗುತ್ತಿರುವ ಪ್ರಯಾಣ ದರದ ಮೇಲೆ ನಿಯಂತ್ರಣ ಹೇರುವ ಕಾನೂನು ಕರ್ನಾಟಕದಲ್ಲಿ ಅಗತ್ಯವಾಗಿರುತ್ತದೆ.
ದುಬಾರಿ ಬೆಲೆಯ ಖಾಸಗಿ ಬಸ್ಟಿಕೆಟ್ ನಿಮಗಾಗಿ. pic.twitter.com/9DDH3hWwJW
— Rajesh shet (@rajeshpshet) October 24, 2019