ತುಮಕೂರು: ಕೊರೋನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಶವ ಹಸ್ತಾಂತರ ವಿಚಾರದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕನ ಒತ್ತಡ ಎಂದಿದ್ದ ಮಾಜಿ ಶಾಸಕ ಸುರೇಶ್ ಗೌಡ ಮುಖಭಂಗ ಅನುಭವಿಸುವಂತಾಗಿದೆ.
ಈ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸ ವೀರಭದ್ರಯ್ಯ ಹಾಗೂ ಶಾಸಕ ಡಿಸಿ ಗೌರಿಶಂಕರ್ ನಡುವಿನ ಸಂಭಾಷಣೆಯಲ್ಲಿ ಬಯಲಾಗಿದೆ. ವೈದ್ಯರ ಮೊದಲ ವರದಿಯಲ್ಲಿ ನೆಗಿಟಿವ್ ಬಂದ ಹಿನ್ನೆಲೆಯಲ್ಲಿ ಶವ ಹಸ್ತಾಂತರ ಮಾಡಲಾಗಿದೆ. ಶವ ಹಸ್ತಾಂತ ವಿಚಾರಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲಾ ಅಂತಾ ಒಪ್ಪಿಕೊಂಡಿದ್ದಾರೆ.
ಎರಡು ದಿನಗಳ ಬಳಿಕ ಎರಡನೇ ವರದಿ ಬಂದಾಗ ಮೃತ ವೃದ್ಧನಿಗೆ ಸೋಂಕು ಇರೋದು ಪತ್ತೆಯಾಗಿದೆ. ಇದೇ ವಿಚಾರವಾಗಿ ಶಾಸಕ ಗೌರಿಶಂಕರ್ ಹಾಗೂ ಮಾಜಿ ಶಾಸಕ ಬಿಜೆಪಿ ಸುರೇಶ್ ಗೌಡ ಇಬ್ಬರ ನಡುವೆ ಮಾತಿನ ಸಮರವೇ ನಡೆದಿತ್ತು. ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ಹೊಂದುವ ಹೇಳಿಕೆ ನೀಡಿ. ಸಾಬೀತು ಮಾಡದಿದ್ರೆ ರಾಜಕೀಯ ನಿವೃತ್ತಿಯ ಸವಾಲ್ ಹಾಕಿದರು.