Tuesday, November 29, 2022

ಬಡವರಿಗೆ ರಾಜ್ಯಾದ್ಯಂತ ಉಚಿತ ಔಷಧಿ ಪೂರೈಕೆ ಅಭಿಯಾನ ಆರಂಭಿಸಿದ ಬಿ.ವೈ ವಿಜಯೇಂದ್ರ

Must read

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ವ್ಯಾಪಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಅವರು ಬಡವರಿಗೆ ರಾಜ್ಯಾದ್ಯಂತ ಉಚಿತ ಔಷಧಿ ಪೂರೈಕೆ ಅಭಿಯಾನ ಆರಂಭಿಸಿದ್ದಾರೆ.

ಈ ಬಗ್ಗೆ ಸ್ವತಃ ವಿಜಯೇಂದ್ರ ಅವರು ತಮ್ಮ ಪೇಸ್ ಪೇಜ್‍ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದು, ಪ್ರತಿ ಜಿಲ್ಲೆಯಲ್ಲಿ ಮೂವರು ಕಾರ್ಯಕರ್ತರನ್ನ ನಿಯೋಜಿಸಿದ್ದೇವೆ. ಆಯಾ ಜಿಲ್ಲೆಗಳ ನಿಯೋಜಿತ ಕಾರ್ಯಕರ್ತರಿಗೆ ಫೋನ್ ಮಾಡಿದರೆ ಉಚಿತ ಔಷಧಿ ತಲುಪಿಸುತ್ತಾರೆ ಎಂದು ಹೇಳಿದ್ದಾರೆ.

ಇನ್ನು ವಿಜಯೇಂದ್ರ ಅವರ ಟೀಂಗೆ ಪೋನ್ ಮಾಡಿದರೆ ಸಾಕು. ಮನೆ ಬಾಗಿಲಿಗೆ ಅಗತ್ಯವಾದ ಔಷಧಿ ಪೂರೈಸಲು ಈ ಟೀಂ ಸಜ್ಜಾಗಿದೆ. ಪ್ರತಿ ಜಿಲ್ಲೆಯಲ್ಲಿ ಮೂವರು ಕಾರ್ಯ ನಿರ್ವಹಿಸುತ್ತಾರೆ. ಹಿರಿಯರು, ಮಹಿಳೆಯರು, ಸಣ್ಣ ಪುಟ್ಟ ಖಾಯಿಲೆಗೆ ಔಷಧಿ ಬೇಕಾದವರಿಗೆ ಔಷಧಿ ಪೂರೈಸಲಿದ್ದಾರೆ ಎಂದು ತಿಳಿಸಿದ್ದಾರೆ.

Latest article