Tuesday, November 29, 2022

ಬಡವರಿಗೆ ನಿಮ್ಮ ಕೈಲಾದ ಸಹಾಯ ಮಾಡಿ..!

Must read

ಬೆಂಗಳೂರು: ಸಾಮಾನ್ಯವಾಗಿ ನಮ್ಮ ನಮ್ಮ ಮನೆಗಳಲ್ಲಿ ಹಳೆಯ ವಸ್ತುಗಳು, ವಸ್ತ್ರಗಳು, ನೋಟ್​ ಬುಕ್ಸ್, ಬ್ಯಾಗ್​ಗಳನ್ನು ಕಸದಬುಟ್ಟಿಗೆ ಒಳಗೆ ಬಿಸಾಡುತ್ತೇವೆ ಇಲ್ಲವಾದ್ರೆ ಬೆಂಕಿಗೆ ಹಾಕಿ ಸುಟ್ಟುಬಿಡುತ್ತಾರೆ. ಅದರೆ ಇಲ್ಲೊಂದು ಎನ್​ಜಿಓ ಮನೆಗಳಲ್ಲಿ ಉಪಯೋಗಿದ ವಸ್ತುಗಳನ್ನು ಬಡವರಿಗೆ ವಿಭಿನ್ನ ರೀತಯಲ್ಲಿ ಹಂಚುವ ಪ್ರಯತ್ನ ಮಾಡಿದ್ದಾರೆ.

ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ದೊಡ್ಡ ಪೆಟ್ಟಗೆ. ಜನರು ಇಲ್ಲಿಗೆ ಬಂದು ತಮ್ಮ ಮನೆಗಳಲ್ಲಿ ಉಪಯೋಗಿಸದಂತ ವಸ್ತುಗಳನ್ನು ಇಟ್ಟು ಹೋಗುತ್ತಿದ್ದಾರೆ. ಇನ್ನು ಇಲ್ಲಿ ಇರಿಸಲಾಗಿರುವ ಬಟ್ಟ ಬ್ಯಾಗ್​ಗಳನ್ನು ಬಡವರು ತಮಗೆ ಬೇಕಾಗಿದನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಈ ದೃಶ್ಯವಳಿ ಕಂಡುಬಂದಿದ್ದು ರಾಜಾಜಿನಗರದ ಬಾಶ್ಯಂ ಸರ್ಕಲ್​ ಬಳಿ ಇರುವ ಬಿಬಿಎಂಪಿ ಹೆರಿಗೆ ಆಸ್ಪತ್ರೆಯ ಪಕ್ಕದಲ್ಲಿ.ರೋಟರಿ ಕ್ಲಬ್​ನವರು ಬಡವರಿಗೆ ಹಾಗೂ ಅಸಾಹಯಕರಿಗೆ ಈ ವಿನೂತನ ರೀತಿಯ ಸೇವೆ ಸಲ್ಲಿಸುತ್ತಿದ್ದಾರೆ.

ಈ ಪೆಟ್ಟಿಗೆಯಲ್ಲಿ ವಸ್ತ್ರಗಳನ್ನಷ್ಟೆ ಅಲ್ಲದೆ, ಉಪಯೋಗಿಸದಂತಹ ಪಾತ್ರೆಗಳು, ಬ್ಯಾಗ್​ಗಳು, ಪುಸ್ತಕಗಳು, ಬೆಡ್​ಶೀಟ್​ಗಳು, ಪಾದರಕ್ಷೆಗಳು ಹೀಗೆ ಹಲವಾರು ವಸ್ತುಗಳನ್ನು ಇಲ್ಲಿ ಇಡಬಹುದಾಗಿದೆ. ಇನ್ನು ಈ ಪೆಟ್ಟಿಗೆಯನ್ನು ಮಹಿಳೆಯರಿಗೆ ಹಾಗೂ ಪುರುಷರಿಗೆ ಅಂತ ವಿಂಗಡಿಸಲಾಗಿದ್ದು, ನಿಗದಿತ ಜಾಗಗಳಲ್ಲಿ ವಸ್ತುಗಳನ್ನು ಇರಿಸಬಹುದು.

ಬಲಗೈದಿಂದ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದಂತೆ. ಈ ಗಾದೆಗೆ ತಕ್ಕಂತೆ ಎಷ್ಟೋ ಮಂದಿ ಸಲ್ಲಿಸುತ್ತಿರುವ ಈ ಸೇವೆ ಅನೇಕರಿಗೆ ನಿಸ್ಸಹಾಯಕರಿಗೆ ಸಹಾಯವಾಗುತ್ತಿದೆ.

Latest article