Wednesday, May 18, 2022

ಪ್ರಧಾನಿ ನರೇಂದ್ರ ಮೋದಿ ದೇಶದ ಆಧುನಿಕ ಭಸ್ಮಾಸುರ – ವಿ.ಎಸ್. ಉಗ್ರಪ್ಪ

Must read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಆಧುನಿಕ ಭಸ್ಮಾಸುರ, ಐಟಿ, ಇಡಿ ಎಲ್ಲವನ್ನೂ ಭಸ್ಮ ಮಾಡಿದ್ದಾರೆ ಎಂದು ಮಂಗಳವಾರ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೌರ್ನರ್ ಸ್ಥಾನಮಾನ ಕೂಡ ಭಸ್ಮ ಮಾಡ್ತಿದ್ದಾರೆ. ಸುಪ್ರೀಂಕೋರ್ಟ್ ಇದೆಲ್ಲವನ್ನೂ ಗಮನಿಸುತ್ತಿದೆ. ದೇಶದ ಜನ ಇದನ್ನು ಗಮನಿಸುತ್ತಿದ್ದಾರೆ ಎಂದು ಉಗ್ರಪ್ಪ ತಿಳಿಸಿದರು.

ನಿನ್ನೆಯವರೆಗೆ ಶಿವಸೇನೆ ಎನ್​ಡಿಎ ಮೈತ್ರಿಕೂಟದಲ್ಲಿತ್ತು, ಇದೀಗ ಅಲ್ಲಿಂದ ವಾಪಸ್ ತೆಗೆದುಕೊಂಡಿದ್ದಾರೆ. ಎನ್​ಸಿಪಿ, ಕಾಂಗ್ರೆಸ್ ಜೊತೆ ಮಾತುಕತೆ ನಡೆದಿತ್ತು, ಮಾತುಕತೆ ನಡೆದಿರುವಾಗಲೇ ರಾಜ್ಯಪಾಲರು ಅವಕಾಶ ನಿರಾಕರಿಸಿದ್ದಾರೆ. ರಾಷ್ಟ್ರಪತಿಗಳಿಗೆ ರೆಫರ್ ಮಾಡಿದ್ದಾರೆ. ಇದೆಲ್ಲವೂ ಪ್ರಧಾನಿಯವರ ಕುತಂತ್ರದಿಂದಲೇ ನಡೆದಿದೆ ಎಂದು ವಿ.ಎಸ್.ಉಗ್ರಪ್ಪ ಇದೇ ವೇಳೆ ಕಿಡಿಕಾರಿದರು.

ನಂತರ ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ತೀರ್ಪು ಪ್ರಕಟ ವಿಚಾರವಾಗಿ ತಿಳಿಸಿದ ಅವರು,ಯಡಿಯೂರಪ್ಪನವರಿಗೆ ಎರಡು ನಾಲಿಗೆಯಿದೆ. ಅನರ್ಹರಿಗೂ ನಮಗೂ ಸಂಬಂಧವಿಲ್ಲ ಎಂದಿದ್ದರು. ಆದರೆ ಕೋರ್ ಕಮಿಟಿಸಭೆಯಲ್ಲಿ ಸಂಬಂಧ ಒಪ್ಪಿಕೊಳ್ತಾರೆ. ಅನರ್ಹರಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. 300,800,ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಅವರ ಶಾಸಕರಿಗೂ ಅಷ್ಟು ಅನುದಾನ ನೀಡಿಲ್ಲ, ಅನರ್ಹರ ಸಮಾರಂಭಗಳಲ್ಲಿ ಕಾಣಿಸಿಕೊಳ್ತಾರೆ. ಅವರನ್ನೇ ಆಯ್ಕೆ ಮಾಡಿ ಜನರಿಗೆ ಕರೆ ಕೊಡ್ತಾರೆ. ಈಗ ಟಿಕೆಟ್ ಗಳನ್ನೂ ಖಾಲಿ ಇಟ್ಟಿದ್ದಾರೆ. ಅವರ ಪರ ಈಗಲೇ ತೀರ್ಪು ಬಂದಂತೆ ಮಾತನಾಡ್ತಾರೆ. ಆದರೆ ಸುಪ್ರೀಂಕೋರ್ಟ್ ಮೇಲೆ ನಮಗೆ ಗೌರವವಿದೆ. ಎಲ್ಲವನ್ನೂ ನೋಡಿ ತೀರ್ಪು ಮಾಡುತ್ತದೆ ಎಂದು ಬಿಜೆಪಿ ನಾಯಕರಿಗೆ ಉಗ್ರಪ್ಪ ಎಚ್ಚರಿಕೆ ರವಾನಿಸಿದರು.

Latest article