ಬಾಗಲಕೋಟೆ: ಕೇಂದ್ರಕ್ಕೆ ಸರ್ಕಾರಕ್ಕರ ಆರ್ಥಿಕ ಸಂಕಷ್ಟ(?) ಹೀಗಾಗಿ ಉತ್ತರ ಕರ್ನಾಟಕ ನೆರೆ ಪರಿಹಾರ ವಿಳಂಬಕ್ಕೆ ಆರ್ಥಿಕ ಕುಸಿತ ಕಾರಣ ಇರಬಹುದು(?) ಎಂದು ಉಡುಪಿಯ ಶ್ರೀಕೃಷ್ಣ ಮಠದ ಪೇಜಾವರ ಶ್ರೀಗಳು ಅವರು ಹೇಳಿದರು.
ಈ ವಿಷಯಕ್ಕೆ ಸಂಬಂಧಿದಂತೆ ಜಮಖಂಡಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಶ್ರೀಗಳು, ಕರ್ನಾಟಕ ಮಾತ್ರವಲ್ಲ, ಮಹಾರಾಷ್ಟ್ರ, ಗುಜರಾತ್ಗೂ ಪರಿಹಾರ ಕೊಟ್ಟಿಲ್ಲ, ಬೇಗ ಪರಿಹಾರ ಕೊಡಿ ಅಂತ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದೇನೆ. ಪತ್ರದಲ್ಲಿ ನನ್ನ ಭಾವನೆಗಳನ್ನು ಹೊರಹಾಕಿದ್ದೇನೆ. ಪತ್ರಕ್ಕೆ ಸ್ಪಂದನೆ ಹೇಗೆಲ್ಲ ಸಿಗುತ್ತೆ ನೋಡೋಣ ಎಂದು ಅವರು ತಿಳಿಸಿದರು.
ಅಲ್ಲದೇ ಮೋದಿ ಅವರು ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ಅಭಿವೃದ್ದಿ ಕೆಲಸಗಳು ಆಗಿವೆ. ನೆರೆ ಪರಿಹಾರ ಮಾತ್ರ ವಿಳಂಬ ಆಗಿದೆ. ಪರಿಹಾರ ಬರಬಹುದು ಅನ್ನೋ ವಿಶ್ವಾಸ ಇದೆ ಎಂದು ನೆರೆ ಪರಹಾರ ವಿಳಂಬದ ಬಗ್ಗೆ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ ಪಟ್ಟ ಕಟ್ಟಿದ ಸದಾನಂದಗೌಡರ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಸದಾನಂದ ಗೌಡ್ರು ಸೂಲಿಬೆಲೆ ಅವರ ಹೆಸರು ಹೇಳಿ ದೇಶದ್ರೋಹಿ ಅಂದಿಲ್ಲ, ಸೂಲಿಬೆಲೆ ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಯುವಕರ ಸಂಘಟನೆ ಮಾಡಿದ್ದಾರೆ, ಸದಾನಂದಗೌಡ್ರು ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಸಂಸದರ ಬಗ್ಗೆ ಮಾತಾಡಿದ್ರೂ ಅಂತ ಬೇಸರದಲ್ಲಿ ಹಾಗೆ ಹೇಳಿರಬಹುದು, ಸಂಸದರು ಸೂಚನೆ ಕೊಟ್ಟ ಮಾತ್ರಕ್ಕೆ ಯಾರನ್ನೂ ದೇಶದ್ರೋಹಿ ಅನ್ನಕಾಗಲ್ಲ ಎಂದರು.
ಅಲ್ಲದೇ ಬಿಜೆಪಿಯಲ್ಲಿ ಯಡಿಯೂರಪ್ಪ ಕೈ ಕಟ್ಟಿ ಹಾಕ್ತಿದ್ದಾರಾ ಅನ್ನೋ ವಿಚಾರದಲ್ಲಿ ನನಗೆ ಹಾಗೇ ಅನ್ನಿಸಿಲ್ಲ, ಯಡಿಯೂರಪ್ಪ ಮತ್ತು ಸಂಘ ಪರಿವಾರದ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇದನ್ನು ಸಂಘ ಪರಿವಾರದವರೇ ಹೇಳಿದ್ದಾರೆ. ಅಲ್ಲಿಂದ ಯಾವುದೇ ತೊಂದರೆ ಆಗಿಲ್ಲ, ಕೆಲ ಮಠಾಧೀಶರು ಹೋರಾಟ ಮಾಡ್ತೇವೆ. ಅಂದಿದ್ದು ಗೊತ್ತಾಗಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಆ ಬಗ್ಗೆ ನಾನು ಏನು ಹೇಳಲ್ಲ ಎಂದು ಪೇಜಾವರ ಶ್ರೀಗಳು ಮಾತನಾಡಿದ್ದಾರೆ.