Wednesday, May 18, 2022

ನೆರವು ಕೊಡದೆ ಇದ್ರೆ, ನಾವು ಸಮ್ಮನೆ ಇರಲ್ಲ..! ಸಿ.ಟಿ ರವಿ

Must read

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡೋದು ಎಲ್ಲರ ಹಕ್ಕಿದೆ. ಇನ್ನುವರೆಗೂ ಕೇಂದ್ರ ಸರ್ಕಾರ ಯಾವ ರಾಜ್ಯಕ್ಕೂ ನೆರೆಪರಿಹಾರ ಬಿಡುಗಡೆ ಮಾಡಿಲ್ಲ. ಹೀಗಾಗಿ ಕೇಂದ್ರ ಆದಷ್ಟು ಬೇಗನೆ ರಾಜ್ಯಕ್ಕೆ ಪರಿಹಾರ ನೀಡುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಅವರು ಗುರುವಾರ ಭರವಸೆ ವ್ಯಕ್ತಪಡಿಸಿದರು.

ನಗರದಲ್ಲಿ ನರೆಪರಿಹಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ಅಂಕಿ ಅಂಶಗಳನ್ನು ಕ್ರೋಢಿಕರಣ ಮಾಡಿ ಪರಿಹಾರ ನೀಡಲಿದ್ದಾರೆ ಎಂದು ನನಗೆ ಮಾಹಿತಿ ನೀಡಿದ್ದಾರೆ. ನೆರವು ಬಂದೆ ಬರುತ್ತದೆ. ನಮಗೆ ನೆರವು ಬಾರದೆ ಇದ್ದರೆ ನಾವು ಸಮ್ಮನೆ ಇರಲ್ಲ ಎಂದು ಅವರು ತಿಳಿಸಿದರು.

ಇದಲ್ಲದೇ ನಾನು ಹತ್ತು ವರ್ಷಗಳ ಅಂಕಿ ಅಂಶ ಕೇಳಿದ್ದೇನೆ. ಈ ಹಿಂದೆ ಎಷ್ಟು ತಿಂಗಳಲ್ಲಿ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ಪಡೆಯುತ್ತೇನೆ. ಮುಂದಿನ ದಿನಗಳಲ್ಲಿ ನಿಮಗೆ ಸೂಕ್ತ ಮಾಹಿತಿ ಕೊಡುತ್ತೇನೆ ಎಂದು ಅವರು ಹೇಳಿದರು.

ನೆರೆ ಪರಿಹಾರ ವಿಚಾರದಲ್ಲಿ ತಡ ಹಿನ್ನಲೆಯಲ್ಲಿ ಪ್ರಶ್ನೆ ಮಾಡಿದವರು ದೇಶದ್ರೋಹಿಗಳು ಎಂದಿದ್ದ ಡಿ.ವಿ ಸದಾನಂದಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೆರೆ ಪರಿಹಾರದಲ್ಲಿ ತುರ್ತು ಪರಿಹಾರ ನೀಡುವುದನ್ನು ಇತ್ತೀಚೆಗೆ ನಿಲ್ಲಿಸಿದ್ದಾರೆ. ಇದರಲ್ಲಿ ಕರ್ನಾಟಕದ ಪಾಲು ಸಿಕ್ಕೆ ಸಿಗುತ್ತದೆ. ನಮ್ಮ ಭಾವನೆಗಳು ವ್ಯವಹಾರವನ್ನು ಮೀರಿದ್ದು ಎಂದರು.

ಒಂದು ವೇಳೆ ನಾವು ವಿಪಕ್ಷ ಸ್ಥಾನದಲ್ಲಿ ಇದ್ದಿದ್ರೆ ಖಂಡಿತ ಸುಮ್ಮನೆ ಇರುತ್ತಿರಲಿಲ್ಲ ನಿಜ. ಈಗ ಆಡಳಿತದಲ್ಲಿದ್ದೂ ನೆರೆ ಪರಿಹಾರ ಬರದೆ ಇದ್ದರೆ ಈಗಲೂ ನಾವು ಸುಮ್ಮನೆ ಇರಲ್ಲ. ಆದರೆ ಪರಿಹಾರ ಬಂದೆ ಬರುತ್ತದೆ. ಆದರೆ ಯಾಕೆ ತಡವಾಗುತ್ತಿದೆ ಎಂಬುದನ್ನು ನಾನು ತಿಳಿದುಕೊಳ್ಳುತ್ತೇನೆ ಎಂದು ಸಿ.ರವಿ ಅವರು ಹೇಳಿದ್ದಾರೆ.

Latest article