Tuesday, August 16, 2022

ನಿರ್ಮಾಪಕರಿಗೆ UFO ಡೈರೆಕ್ಟರ್ ಶಾಕಿಂಗ್ ನ್ಯೂಸ್..!

Must read

ಕೊರೊನಾ ಎಫೆಕ್ಟ್ಗೆ ಬಣ್ಣದಲೋಕ ತತ್ತರಿಸಿ ಹೋಗ್ತಿದೆ. ಹಾಲಿವುಡ್ ಫಿಲ್ಮ್ ಮೇಕರ್ಗಳೇ ಈ ವರ್ಷದ ಸಿನಿಮಾಗಳನ್ನ ಮುಂದಿನ ವರ್ಷಕ್ಕೆ ಪೋಸ್ಟ್ಪೋನ್ ಮಾಡ್ಕೋತಿದ್ದಾರೆ. ಇನ್ನು ನಮ್ಮ ಇಂಡಿಯನ್ ಸಿನಿಮಾಗಳ ಕಥೆ ಮತ್ತಷ್ಟು ಪಾತಾಳಕ್ಕೆ ಕುಸಿದಿದೆ. ಈ ಮಧ್ಯೆ UFO ಜಾಯಿಂಟ್ ಮ್ಯಾನೇಜಿಂಗ್ ಡೈರೆಕ್ಟರ್ ಹೇಳಿರೋ ಮಾತುಗಳು ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸ್ತಿದೆ.

ನಿರ್ಮಾಪಕರಿಗೆ UFO ಡೈರೆಕ್ಟರ್ ಶಾಕಿಂಗ್ ನ್ಯೂಸ್..!!

ಕನ್ನಡದಿಂದ ಹಾಲಿವುಡ್ವರೆಗೆ ಎಲ್ಲಾ ಪೋಸ್ಟ್ಪೋನ್

ಸಿನಿಮಾ ವಿತರಣೆಗೆ ನೆಟ್ ಬಾಕ್ಸಾಫೀಸ್ ಕಲೆಕ್ಷನ್ ಸ್ಕೀಮ್

ನಿರ್ಮಾಪಕರಿಗೆ ಸಿನಿಮಾ ಸಕ್ಸಸ್ ಮೇಲೆ ಹಣ ಸಂದಾಯ

ಡಬ್ಬಗಳಲ್ಲಿ ರೀಲ್ಗಳನ್ನು ತುಂಬಿಸಿಕೊಂಡು ಬಂದು ಆ ಮೂಲಕ ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನ ಮಾಡ್ತಿದ್ದ ಕಾಲ ಮುಗಿದು ಡಿಜಿಟಲ್ ಯುಗ ಬಂದಾಗಿದೆ. ಆದ್ರೆ ಈ ಡಿಜಿಟಲ್ ಯುಗಕ್ಕೂ ಅದರದ್ದೇ ಆದಂತಹ ಹತ್ತು ಹಲವು ಸವಾಲುಗಳಿವೆ. ಸದ್ಯ ಕೊರೊನಾ ಹಾವಳಿಗೆ ಇಡೀ ಚಿತ್ರರಂಗ ಬಾಯಿಮುಚ್ಚಿ, ಕೈಕಟ್ಟಿ ಕೂರುವಂತಾಗಿದೆ. ವಿಶ್ವಾದ್ಯಂತ ಕೋವಿಡ್- 19 ಅಟ್ಟಹಾಸ ಮೆರೆಯುತ್ತಿದ್ದು, ಇಡೀ ವರ್ಲ್ಡ್ ಸಿನಿದುನಿಯಾದ ಮೇಲೆ ಅದ್ರ ಎಫೆಕ್ಟ್ ದೊಡ್ಡ ಪ್ರಮಾಣದಲ್ಲಿ ಆಗ್ತಿದೆ.

ಕ್ವಾಲಿಟಿ ಸಿನಿಮಾಗಳನ್ನ ಕೊಡೋ ನಿಟ್ಟಿನಲ್ಲಿ ಫೈನಾನ್ಸಿಯರ್ಗಳಿಂದ ಕೋಟ್ಯಾಂತರ ರೂಪಾಯಿ ತಂದು, ಬಂಡವಾಳ ಹಾಕಿ ಸಿನಿಮಾ ಮಾಡಿರೋ ನಿರ್ಮಾಪಕರು ಇದೀಗ ಕೊರೊನಾದಿಂದಾಗಿ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಹಾಲಿವುಡ್ನಂತಹ ದೊಡ್ಡ ದೊಡ್ಡ ಫಿಲ್ಮ್ ಮೇಕರ್ಗಳೇ ತಮ್ಮ ಬಹುಕೋಟಿ ವೆಚ್ಚದ ಸಿನಿಮಾಗಳ ರಿಲೀಸ್ ಪೋಸ್ಟ್ಪೋನ್ ಮಾಡಿಕೊಳ್ತಿದ್ದಾರೆ. ಇನ್ನು ನಮ್ಮ ಕನ್ನಡ ಸಿನಿಮಾಗಳ ರಿಲೀಸ್ ಬಗ್ಗೆ ನೀವೇ ಒಮ್ಮೆ ಊಹಿಸಿಕೊಳ್ಳಿ.

ಇನ್ನು ಸಿನಿಮಾಗಳು ರಿಲೀಸ್ ಆಗಬೇಕು ಅಂದ್ರೆ, ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಎನ್ಓಸಿ ತೆಗೆದುಕೊಂಡು, ಬಳಿಕ ಚೆನ್ನೈನಲ್ಲಿರೋ UFO ಕಚೇರಿಗೆ ತೆರಳಿ, ಅಲ್ಲಿ ಕ್ಯೂಬ್ ಅಥ್ವಾ UFOಗೆ ಸಿನಿಮಾ ಕಂಟೆಂಟ್ನ ಅಪ್ಲೋಡ್ ಮಾಡಿಸಬೇಕು. ಅದಾದ ಬಳಿಕವಷ್ಟೇ ಸ್ಯಾಟಲೈಟ್ ಮುಖೇನ ಸಿನಿಮಾದ ರಿಲೀಸ್, ಪ್ರದರ್ಶನ ಹಾಗೂ ವೀಕ್ಷಣೆ ನಡೆಯಲಿದೆ. ಆದರೀಗ ಯುಎಫ್ಓ ಕೂಡ ಬಂದ್ ಆಗಿದೆ.

ಜೂನ್ ಅಂತ್ಯದವರೆಗೂ ಸಿನಿಮಾ ಥಿಯೇಟರ್ಗಳು ಓಪನ್ ಆಗೋದು ಗ್ಯಾರೆಂಟಿ ಇಲ್ಲ. ಒಂದು ವೇಳೆ ಆದರೂ ಸಹ, ಅಸಲಿ ಬ್ಯುಸಿನೆಸ್ ಶುರುವಾಗಲು, ಜನ ಪರದೆಗ ಕಡೆ ಮುಖ ಮಾಡಲು ಸೆಪ್ಟೆಂಬರ್‌ವರೆಗೂ ಸಮಯ ಹಿಡಿಯಲಿದೆ. ಥಿಯೇಟರ್ಗಳು ಪ್ರದರ್ಶನ ಶುರು ಮಾಡಿದ ಕನಿಷ್ಟ 6ರಿಂದ 9 ತಿಂಗಳು ಈ ಹಿಂದಿನ ಲಯ ಕಂಡುಕೊಳ್ಳೋಕ್ಕೆ ಕಾಲಾವಕಾಶ ಬೇಕಾಗುತ್ತದೆ ಅಂತ ಅಭಿಪ್ರಾಯ ಪಟ್ಟಿದ್ದಾರೆ.

Also read:  ಅಭಿಮಾನಿ ಮುಂದೆ ಸರಳತೆ ಮೆರೆದ ಸೂಪರ್ ಸ್ಟಾರ್​ ರಜನಿಕಾಂತ್.!

ಇನ್ನು ದೇಶಾದ್ಯಂತ ಯುಎಫ್ಓ ಸಂಸ್ಥೆಯಲ್ಲಿ ಕೆಲಸ ಮಾಡೋ ಕೆಲಸಗಾರರಿಗೂ ಲಾಕ್ಡೌನ್ ಹಾಗೂ ಕೊರೊನಾ ಎಫೆಕ್ಟ್ನಿಂದ ರಜೆ ನೀಡಿದ್ದು, ಅವ್ರೆಲ್ಲಾ ಮತ್ತೆ ಕೆಲಸಗಳಿಗೆ ಮರಳಲು ಜುಲೈ ಆದರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ. ಇದರ ಜೊತೆಗೆ ಯುಎಫ್ಓ ಸಂಸ್ಥೆಯೇ ನಿರ್ಮಾಪಕರಿಗೆ ಸಹಕಾರಿ ಆಗುವಂತೆ NBOC- ನೆಟ್ ಬಾಕ್ಸಾಫೀಸ್ ಕಲೆಕ್ಷನ್ ಸ್ಕೀಮ್ನ ಶುರು ಮಾಡ್ತಿದೆ, ಈ ಮೂಲಕ ಡಿಸ್ಟ್ರಿಬ್ಯೂಷನ್ಗೂ ಇಳಿಯಲಿದ್ದು, ಸಿನಿಮಾ ಸಕ್ಸಸ್ ರೇಟ್ ಆಧರಿಸಿ ನಿರ್ಮಾಪಕರಿಗೆ ಹಣ ನೀಡುವ ಯೋಜನೆಯಲ್ಲಿದೆ.

Also read:  ಎಂಆರ್‌ಪಿ ಬೆಲೆಗೆ: ನಾಳೆಯಿಂದ ಲಾಡ್ಜ್, ಬಾರ್, ಕ್ಲಬ್​ಗಳಲ್ಲಿ ಮದ್ಯ ಮಾರಾಟ

ಹೀಗಿರುವಾಗಲೇ ಹಾಲಿವುಡ್ನ ದೈತ್ಯ ನಿರ್ಮಾಣ ಕಂಪೆನಿಗಳೆಲ್ಲಾ ಸಿನಿಮಾ ರಿಲೀಸ್ಗೆ ಹೆದರಿ, ಒಂದಷ್ಟು ಸಿನಿಮಾಗಳು ಮುಂದಿನ ವರ್ಷಕ್ಕೆ, ಮತ್ತೊಂದಷ್ಟು ಸಿನಿಮಾಗಳು ಇದೇ ವರ್ಷಾಂತ್ಯಕ್ಕೆ ಬರೋ ಪ್ಲಾನ್ನಲ್ಲಿವೆ. ಹಾಲಿವುಡ್ ಕಡೆ ನೋಡಿ ಅದೇ ಫಾರ್ಮುಲಾನ ನಮ್ಮ ಬಾಲಿವುಡ್ ಫಿಲ್ಮ್ ಮೇಕರ್ಗಳೂ ಅನುಸರಿಸ್ತಿದ್ದಾರೆ. ಅಧಿಕೃತ ಮೂಲಗಳ ಪ್ರಕಾರ ಸದ್ಯ ರೀ ಶೆಡ್ಯೂಲ್ ಆಗಿರೋ ಸಿನಿಮಾಗಳ ಡಿಟೈಲ್ಸ್ ಈ ಕೆಳಗಿನಂತಿದೆ.

ಪೋಸ್ಟ್‌ಪೋನ್ ಆದ ಹಾಲಿವುಡ್ ಮೂವೀಸ್

ಸಿನಿಮಾ ನಿಗದಿತ ದಿನಾಂಕ ಬದಲಾದ ದಿನಾಂಕ

ಫಾಸ್ಟ್ & ಫ್ಯೂರಿಯಸ್ 9 2020 ಮೇ 22 2021 ಏಪ್ರಿಲ್ 2

ನೋ ಟೈಮ್ ಟು ಡೈ 2020 ಏಪ್ರಿಲ್ 3 2020 ನವೆಂಬರ್ 12

ಕ್ವೈಟ್ ಪ್ಲೇಸ್- 2 2020 ಮಾರ್ಚ್ 8 2020 ಸೆಪ್ಟೆಂಬರ್ 4

ಟಾಪ್ ಗನ್ 2020 ಆಗಸ್ಟ್ 2020 ಡಿಸೆಂಬರ್ 23

ವಂಡರ್ ವುಮನ್ 1984 2020 ಆಗಸ್ಟ್ 14 2020 ಅಕ್ಟೋಬರ್

ವಾರ್ನರ್ ಮೂವೀಸ್ 2020 2021

ಪೋಸ್ಟ್‌ಪೋನ್ ಆದ ಬಾಲಿವುಡ್ ಮೂವೀಸ್

ಸಿನಿಮಾ ನಿಗದಿತ ದಿನಾಂಕ ಬದಲಾದ ದಿನಾಂಕ

83 ವರ್ಲ್ಡ್ ಕಪ್ 2020 ಏಪ್ರಿಲ್ 10 2020 ಜೂನ್ 19

ಸೂರ್ಯವಂಶಿ 2020 ಮಾರ್ಚ್ 24 2020 ಜುಲೈ 3

ರಾಧೆ 2020 ಮೇ 22 2020 ಜುಲೈ 31

ಹೀಗೆ ಹಾಲಿವುಡ್ ಮತ್ತು ಬಾಲಿವುಡ್ನ ಬಿಗ್ ಬ್ಯಾನರ್ ಸೂಪರ್ ಸ್ಟಾರ್ ಮೂವಿಗಳು ರೀ ಶೆಡ್ಯೂಲ್ ಆಗಿವೆ. ಆದ್ರೆ ಕೊರೊನಾ ಹಾವಳಿ ಮತ್ತಷ್ಟು ಉಲ್ಬಣಗೊಂಡರೆ, ಮಗದೊಮ್ಮೆ ಪೋಸ್ಟ್ಪೋನ್ ಆದರೂ ಅಚ್ಚರಿಯಿಲ್ಲ ಎನ್ನಲಾಗ್ತಿದೆ. ಅದೇನೇ ಇರಲಿ ವಿಶ್ವ ಸಿನಿದುನಿಯಾದಲ್ಲಿ ಸಾವಿರಾರು ಕೋಟಿ ರೂಗಳು ನಷ್ಟ ಆಗ್ತಿರೋದು ಸುಳ್ಳಲ್ಲ. ಇದಕ್ಕೆಲ್ಲಾ ಯಾವಾಗ ಬ್ರೇಕ್ ಬೀಳುತ್ತೋ ಕಾದುನೋಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಹೆಡ್, ಟಿವಿ5

Latest article