ಇದೇ ಅಕ್ಟೋಬರ್ 2ರಿಂದ ನಿಮ್ಮ ನೆಚ್ಚಿನ ಮೂವಿಮನೆ ಕಾರ್ಯಕ್ರಮ ಬದಲಾದ ಸಮಯದಲ್ಲಿ ಪ್ರಸಾರವಾಗಲಿದೆ. ಸಂಜೆ 6.30ಕ್ಕೆ ಪ್ರಸಾರವಾಗುತ್ತಿದ್ದ ಮೂವಿಮನೆ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.
ದೊಡ್ಡ ದೊಡ್ಡ ಸ್ಟಾರ್ಗಳಿಂದ ಹಿಡಿದು, ಸಿನಿದುನಿಯಾಗೆ ಕಾಲಿಡುವ ಯುವ ಪ್ರತಿಭೆಗಳ ಬಗ್ಗೆ, ಕನ್ನಡವಷ್ಟೇ ಅಲ್ಲದೇ, ಬೇರೆ ಬೇರೆ ಸಿನಿಮಾ ಇಂಡಸ್ಟ್ರಿಗಳ ಬಗ್ಗೆ ಸಮಗ್ರ ಸುದ್ದಿ ಬಿತ್ತರಿಸುತ್ತಿದ್ದ ಮೂವಿಮನೆ ಕಾರ್ಯಕ್ರಮದ ಸಮಯವನ್ನ ಬದಲಾಯಿಸಲಾಗಿದೆ.
ಅಕ್ಟೋಬರ್ 2ಕ್ಕೆ ಟಿವಿ5 ಕನ್ನಡ ಚಾನೆಲ್ ಎರಡು ವರ್ಷ ಪೂರೈಸಿ, ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದು, ಕೆಲ ಬದಲಾವಣೆಯಾಗಿ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದ್ದ ಮೂವಿಮನೆ ಕಾರ್ಯಕ್ರಮ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.