ಮಂಡ್ಯ: ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸಲು ಆಗ್ರಹಿಸಿ ರೈತರು ಹಾಗೂ ವಿವಿಧ ಪಕ್ಷದ ಮುಖಂಡರ ಪ್ರತಿಭಟನೆ ಹಿನ್ನೆಲೆ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರತಿಕ್ರಿಯೆ ನೀಡಿದ್ದು, ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಟ್ಟು ಆರಂಭ ಮಾಡುವುದು ಬೇಡ ಎಂದು ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇಷ್ಟು ವರ್ಷ ಕಾರ್ಖಾನೆ ಸ್ಥಗಿತಗೊಂಡಿತ್ತಲ್ಲ ಪ್ರತಿಭಟನೆ ಏಕೆ ಮಾಡಲಿಲ್ಲ(?) ಅವಾಗಿಲ್ಲದ ನಿಮ್ಮ ರೋಷಾ-ವೇಷ ಹೀಗೇಕೆ(?) ಎಂದು ಪ್ರತಿಭಟನಕಾರರಿಗೆ ಪ್ರಶ್ನೆ ಮಾಡಿದರು.
ಸದ್ಯ ಈಗ ಯಾವ ಚುನಾವಣೆ ಸಹ ಇಲ್ಲ. ಆಗಿದ್ದರೂ ಕಾರ್ಖಾನೆ ತೆರೆಯಲು ನೀವು ಬಿಡುತ್ತಿಲ್ಲ. ನಿಮಗೇಕೆ ಈ ವಿಚಾರದಲ್ಲಿ ಆತಂಕ ಎಂದರು.
ಅದುವಲ್ಲದೇ, ಜಿಲ್ಲೆಯ ಶಾಸಕರು ಓ ಅಂಡ್ ಎಂ ಮೂಲಕ ಕಾರ್ಖಾನೆ ತೆರೆಯಲು ವಿರೋಧಿಸುತ್ತಿದ್ದಾರೆ. ಖಾಸಗೀಕರಣ ಮಾಡಿ ಕಾರ್ಖಾನೆ ತೆರೆದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ಕೊಡುತ್ತಾರೆ. ನಿಮ್ಮದು ಉಗ್ರ ಹೋರಾಟವಲ್ಲ. ಸ್ವಾರ್ಥ ರಾಜಕಾರಣ. ಉಗ್ರ ಹೋರಾಟ ಮಾಡುತ್ತಿರೋರು ಭಾರತ-ಚೀನಾ ಗಡಿಯಲ್ಲಿ ನಮ್ಮ ಸೈನಿಕರು. ಉಗ್ರ ಹೋರಾಟ ಎನ್ನಲು ನಿಮಗ್ಯಾವ ನೈತಿಕತೆ ಇದೆ ಎಂದು ಸುಮಲತಾ ಅಂಬರೀಶ್ ಅವರು ಜೆಡಿಎಸ್ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.