ಬೆಂಗಳೂರು: ರಾಜೀನಾಮೆ ಕೊಟ್ಟಿದ್ದೀನಿ, ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇನೆ ಎಂದು ಅನರ್ಹ ಶಾಸಕ ಮುನಿರತ್ನ ಅವರು ಮಂಗಳವಾರ ಹೇಳಿದರು.
ನಗದರಲ್ಲಿ ಟಿವಿ5 ಕನ್ನಡದ ಜೊತೆ ಮಾತನಾಡಿದ ಅವರು, ನಾಳೆ ನಮ್ಮ ವಕೀಲರು ವಾದ ಮಾಡಲಿಕ್ಕೆ ಸಿದ್ದರಿದ್ದಾರೆ. ನಾನೂ ನಾಳೆ ಹೋಗಿ ನೀಡುತ್ತೇನೆ ಎಂದು ಅವರು ಸ್ಪಷ್ಟನೆ ನೀಡಿದರು.
ಇನ್ನು ತುಳಸಿ ಮುನಿರಾಜು ಗೌಡ ಕೇಸ್ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿಗೆ ಸೇರುತ್ತೇನೆ ಅಂತ ನಿಮಗೆ ಯಾರು ಹೇಳಿದರೋ ಗೊತ್ತಿಲ್ಲ, ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಹಕ್ಕು ಎಲ್ಲರಿಗೂ ಇದೆ. ನ್ಯಾಯಾಲಯಕ್ಕೆ ಹೋಗಲು ಪ್ರತಿಯೊಬ್ಬರೂ ಹಕ್ಕುದಾರರು, ಸ್ವತಂತ್ರರು. ನಾನು ಬಿಜೆಪಿಗೆ ಹೋಗುತ್ತೇನೆ ಅಂತ ನಾನು ಎಲ್ಲೂ ಹೇಳಿಲ್ಲ ಎಂದು ಅವರು ತಿಳಿಸಿದರು.
ಅದುವಲ್ಲದೇ ನಾನು ಬಿಜೆಪಿಗೆ ಹೋಗುವ ಬಗ್ಗೆ ಯಾವ ವಲಯದಲ್ಲಿ ಚರ್ಚೆ ಮಾಡುತ್ತಿದ್ದಾರೆ ನನಗೆ ಮಾಹಿತಿ ಇಲ್ಲ, ರಾಜೀನಾಮೆ ಕೊಟ್ಟ ನಂತರ ಏನೇನು ಆಗಿದೆ ಅಂತ ನಿಮಗೂ ಗೊತ್ತಿದೆ. ಯಾವ ಪಕ್ಷಕ್ಕೆ ಹೋಗುತ್ತೇವೆ ಅಂತ ಇನ್ನೂ ಚರ್ಚೆ ಆಗಿಲ್ಲ ಎಂದು ಅವರು ತಿಳಿಸಿದರು.
ಅಂತೆಯೇ 17 ಮಂದಿ ಶಾಸಕರೂ ಬಿಜೆಪಿಗೆ ಹೋಗುವ ಚರ್ಚೆ ಮಾಡಿಲ್ಲ, ಅಭಿವೃದ್ಧಿ ಕೆಲಸ ಯಾರು ಮಾಡುತ್ತಾರೋ ಅಲ್ಲಿ ಹೋಗುತ್ತೇನೆ ಅದರಲ್ಲಿ ಏನು ತಪ್ಪಿದೆ ಎಂದು ಮುನಿರತ್ನ ಅವರು ಮರುಪ್ರಶ್ನೆ ಮಾಡಿದರು.