ಸ್ಯಾಂಡಲ್ವುಡ್ನಲ್ಲಿ ನಾಳೆ ಒಂದಲ್ಲ ಎರಡಲ್ಲ ಬರೊಬ್ಬರಿ 4 ಸಿನಿಮಾಗಳು ತೆರೆಗೆ ಬರೋಕ್ಕೆ ಸಜ್ಜಾಗಿವೆ. 4 ಸಿನಿಮಾಗಳು ಒಂದಕ್ಕಿಂದ ಒಂದು ವಿಭಿನ್ನವಾಗಿದ್ದು, ಈಗಾಗ್ಲೇ ಟ್ರೇಲರ್ ಮತ್ತು ಸಾಂಗ್ಸ್ ಮೂಲಕ ಗಮನ ಸೆಳೆದಿವೆ.
ಈ ವಾರ ತೆರೆಗೆ ಬರೋಕ್ಕೆ ಸಜ್ಜಾಗಿರೋ 4 ಸಿನಿಮಾಗಳ ಸಾಲಿನಲ್ಲಿ ಹೆಚ್ಚು ಸುದ್ದಿ ಮಾಡ್ತಿರೋ ಸಿನಿಮಾ ಗೋಲ್ಡನ್ ಸ್ಟಾರ್ ಅಭಿನಯದ ಗೀತಾ ಚಿತ್ರ. ಗೋಕಾಕ್ ಚಳುವಳಿ ಕುರಿತಾದ ಕಥೆ ಜೊತೆಗೆ ಲವ್ ಸ್ಟೋರಿಯನ್ನು ಬ್ಲೆಂಡ್ ಮಾಡಿ ತೆರೆಗೆ ತರ್ತಿರೋ ವಿಭಿನ್ನ ಸಿನಿಮಾ ಇದು. ಗಣಿ ಸಿನಿಕರಿಯರ್ನಲ್ಲಿ ಸಖತ್ ಡಿಫ್ರೆಂಟ್ ಸಿನಿಮಾ ಇದಾಗಿದ್ದು,ವಿಜಯ್ ನಾಗೇಂದ್ರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಗೋಲ್ಡನ್ ಸ್ಟಾರ್ಗೆ ಜೋಡಿಯಾಗಿ ಚಿತ್ರದಲ್ಲಿ ಮೂವರು ನಾಯಕಿಯರಿದ್ದು,ಅನುಪ್ ರುಬೆನ್ಸ್ ಮ್ಯೂಸಿಕ್ ಚಿತ್ರಕ್ಕಿದೆ. ವಿಶೇಷ ಎಂದರೇ ಗೀತಾ ಚಿತ್ರದ ಮೂಲಕ ಅಣ್ಣಾವರ ಮತ್ತು ಕರಾಟೆಕಿಂಗ್ ಶಂಕರಣ್ಣನ ನೆನಪುಗಳನ್ನು ಮೆಲುಕು ಹಾಕ್ಬಹುದಾಗಿದೆ.
ಇನ್ನು ಗೀತಾ ಚಿತ್ರದ ಜೊತೆಗೆ ಕ್ಯೂರಿಯಾಸಿಟಿ ಹುಟ್ಟಿಸಿರೋ ಮತ್ತೊಂದು ಸಿನಿಮಾ ಕಿಸ್. ಔಟ್ ಅಂಡ್ ಔಟ್ ಕಮರ್ಷಿಯಲ್ ಲವ್ ಸ್ಟೋರಿ ಇದಾಗಿದ್ದು, ಮೊದಲ ಬಾರಿಗೆ ಎಪಿ ಅರ್ಜುನ್ ನಿರ್ದೇಶನದ ಜೊತೆ ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ.
ಫಸ್ಟ್ ಟೈಮ್ ನಾಯಕನಾಗಿ ವಿರಾಟ್ ಮತ್ತು ನಾಯಕಿಯಾಗಿ ಶ್ರೀಲೀಲಾ ಅಭಿನಯಿಸಿದ್ದು, ಈಗಾಗ್ಲೇ ಚಿತ್ರದ ಹಾಡುಗಳು ಸಖತ್ ವೈರಲ್ ಆಗಿದೆ. ಸ್ಯಾಂಡಲ್ವುಡ್ ಸ್ಟಾರ್ಸ್ ಕೂಡ ಕಿಸ್ ಟ್ರೇಲರ್ ಮತ್ತು ಸಾಂಗ್ಸ್ ನೋಡಿ ಮೆಚ್ಚಿಕೊಂಡಿದ್ದಾರೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಲೀಡ್ರೋಲ್ನಲ್ಲಿ ಮಿಂಚಿದ್ದಾರೆ. ಇನ್ನು ಮಯೂರಿ ಮತ್ತು ದುನಿಯಾ ರಶ್ಮಿ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ರಾಮ್ .ಜೆ ಚಂದ್ರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈಗಾಗ್ಲೇ ಆಟಕ್ಕುಂಟು ಲೆಕ್ಕಕ್ಕಿಲ್ಲ ಟ್ರೇಲರ್ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ಇನ್ನು ಈ ಮೂರು ಸಿನಿಮಾಗಳ ಜೊತೆಗೆ ಮತ್ತೊಂದು ಹಾರರ್ ಸಿನಿಮಾ ತೆರೆಕಾಣ್ತಿದ್ದು, ಅದೇ ನವರಾತ್ರಿ. ಚಿತ್ರದಲ್ಲಿ ದೇವರು ಮತ್ತು ದೆವ್ವ ಈ ಎರಡು ಶಕ್ತಿಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, ಹಾರರ್ ಜೊತೆಗೆ ಕಾಮಿಡಿ ,ಲವ್ ಸ್ಟೋರಿ ಕೂಡ ಸಿನಿಮಾದಲ್ಲಿದೆ.
ತ್ರಿವಿಕ್ರಮ್ ಮತ್ತು ಒರಟ ಐ ಲವ್ ಯೂ ಖ್ಯಾತಿಯ ಹೃದಯ ಲೀಡ್ ರೋಲ್ನಲ್ಲಿ ಮಿಂಚಿದ್ದು, ಹಾಸ್ಯ ನಟ ಶಿವಮಂಜು ಕಾಮಿಡಿ ಕಿಕ್ ಚಿತ್ರದಲ್ಲಿದೆ. ಲಕ್ಷ್ಮೀಕಾಂತ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಸಮನ್ಯಾ ರೆಡ್ಡಿ ಮತ್ತು ವಂಶಿರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.