Wednesday, May 18, 2022

ನಾನು ನೋಡ್ತಿನಿ ಎಂ.ಬಿ ಪಾಟೀಲ್ ಎಷ್ಟು ಗಂಡುಮಗ ಅಂತ..!

Must read

ಬೆಳಗಾವಿ: ನಾವು ಯಾವ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂಬುದನ್ನು ಸುಪ್ರೀಂ ಕೋರ್ಟ್​ ತೀರ್ಪು ಬಂದ ಮೇಲೆ ನಿರ್ಧರಿಸುತ್ತೇವೆ. ಅಲ್ಲಿಯ ತನಕ ನಾವು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಅವರು ಗುರುವಾರ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್​ನಲ್ಲಿ ಇಂದು ಅಥವಾ ನಾಳೆ ತೀರ್ಪು ಬರಲಿದೆ. ಆ ತೀರ್ಪು ನಮಗೆ ಸ್ಪರ್ಧಿಸಲು ಅವಕಾಶ ನೀಡುತ್ತೆ ಎಂಬ ವಿಶ್ವಾಸವಿದೆ. ಸುಪ್ರೀಂಕೋರ್ಟ್ ಉಪಚುನಾವಣೆಯನ್ನು ಮುಂದುಡುತ್ತೋ ಅಥವಾ ನಡೆಸುತ್ತೋ ಎಂಬುದು ಇಂದು ಸಂಜೆ ಅಥವಾ ನಾಳೆ ತಿಳಿಯಲಿದೆ ಎಂದರು.

ಸುಪ್ರೀಂಕೋರ್ಟ್​ ಏನಾದ್ರು ನನಗೆ ಅವಕಾಶ ನೀಡಿದರೆ ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ. ಇನ್ನು ಲಖನ್ ಜಾರಕಿಹೊಳಿ ಮನವೊಲಿಕೆ ವಿಚಾರವಾಗಿ ಮಾತನಾಡಿದ ಅವರು, ಜಾರಕಿಹೊಳಿ ಕುಟುಂಬದ ಹಿರಿಯ ಸದಸ್ಯನಾಗಿ ಲಖನ್ ಜೊತೆ ನಾನು ಮಾತನಾಡುತ್ತೇನೆ, ನನ್ನ ಮಾತುಗಳನ್ನು ಕೇಳುವುದು ಬಿಡೋದು ಅವನಿಗೆ ಬಿಟ್ಟ ವಿಚಾರ ಎಂದು ಅವರು ತಿಳಿಸಿದರು.

ಅಲ್ಲದೇ 30 ನೇ ತಾರಿಖಿನವರೆಗೂ ಲಖನ್ ಜಾರಕಿಹೊಳಿ ನನ್ನ ತಮ್ಮ, ಆಮೇಲೆ ಕಣದಲ್ಲಿದ್ದರೆ ಬೇರೆ ವಿಚಾರ ಮಾಡಿ ಚುನಾವಣೆ ಎದುರಿಸುತ್ತೇವೆ. 30 ನೇ ತಾರೀಖಿನ ನಂತರ ಯಾರು ಕಣದಲ್ಲಿ ಇರುತ್ತಾರೋ ನಾನು ನೋಡುತ್ತೇನೆ. ಕಾರ್ಯಕರ್ತರು ಲಖನ್ ಅವರ ಮನೆಗೆ ಹೋಗು ಅಂದ್ರೆ ಹೋಗ್ತೀನಿ, ಬೇಡ ಅಂದ್ರೆ ಹೋಗಲ್ಲ ಕಾರ್ಯಕರ್ತರ ಮಾತುಗಳೇ ಅಂತಿಮ ಎಂದರು.

ಇತ್ತೀಚಿಗೆ ಜಿಲ್ಲೆಯಲ್ಲಿ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರು ನನ್ನ ಲೆವೆಲ್ ಅಲ್ಲ ರಮೇಶ್ ಜಾರಿಕಿಹೊಳಿ ಎಂದು ಹೇಳಿದ್ದರು. ಈ ಹೇಳಿಕೆ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು ಎಂ.ಬಿ.ಪಾಟೀಲ್ ಎಷ್ಟು ಗಂಡಸು ಇದ್ದಾನೆ ಎಂಬುದಕ್ಕೆ ನಾಳೆ ಅಥಣಿಯಲ್ಲಿ ಉತ್ತರಿಸುತ್ತೇನೆ ಎಂದು ತಿರುಗೇಟು ನೀಡಿದರು.

ನಾನು ಮಂತ್ರಿಯಾಗಿ ಎಂ.ಬಿ.ಪಾಟೀಲ್ ಮನೆಗೆ ಹೋಗಿದ್ದೆ, ಆದರೆ ಮಂತ್ರಿಗಿರಿ ಕಳಕೊಂಡ ಹೋಗಿಲ್ಲ. ಎಂ.ಬಿ ಪಾಟೀಲ್ ಏನು, ಎಷ್ಟು ನಿಜ ಹೇಳುತ್ತಾನೆ ಎಂಬುದಕ್ಕೆ ಅಥಣಿಯಲ್ಲಿ ನಾಳೆ ಉತ್ತರ ಹೇಳುತ್ತೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಎಂಬಿಪಿ ವಿರುದ್ಧ ಗುಡುಗಿದರು.

Also read:  ಡಿ.31 ಕರ್ನಾಟಕ ಬಂದ್​ಗೆ ಚಿತ್ರರಂಗದಿಂದ ನೈತಿಕ ಬೆಂಬಲ: ಫಿಲ್ಮ್ ಚೇಂಬರ್​ನಲ್ಲಿ ಸಾಂಕೇತಿಕ ಮೌನಾಚರಣೆ..!

Latest article