ಪ್ರಧಾನಿ ಮೋದಿ ಶನಿವಾರ ಚೇಂಜ್ ವಿದಿನ್ ಹೆಸರಿನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ್ದು, ಈ ಬಗ್ಗೆ ಸ್ಯಾಂಡಲ್ವುಡ್ ನವರಸ ನಾಯಕ ಜಗ್ಗೇಶ್ ನಯವಾಗೇ ಪ್ರಧಾನಿ ಮಾತಿನ ಚಾಟಿ ಬೀಸಿದ್ದಾರೆ.
ಚಿರು ಸೊಸೆ ಉಪಾಸನಾ ಈ ಬಗ್ಗೆ ಟ್ವೀಟ್ ಮಾಡಿದ್ದು, ಉಪಾಸನಾ ಟ್ವೀಟ್ಗೆ ಜಗ್ಗೇಶ್ ಸಾಥ್ ನೀಡಿದ್ದಾರೆ. ಚಿತ್ರರಂಗ ಅಂದ್ರೆ ಬರೀ ಬಾಲಿವುಡ್ ಅಲ್ಲ ರಾಮ್ ಚರಣ್ ಪತ್ನಿ ಉಪಾಸನಾ ಟ್ವೀಟ್ ಮಾಡಿದ್ದರು. ಇದಕ್ಕೆ ದನಿಗೂಡಿಸಿದ ರಾಮ್ಚರಣ್, ದಕ್ಷಿಣ ಭಾರತದ ಕಲಾವಿದರು ನಿಮ್ಮ ನಿರ್ಧಾರಗಳನ್ನ ಗೌರವಿಸುತ್ತಾರೆ. ನಮಗೂ ಅವಕಾಶ ಕೊಡಿ ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಉತ್ತರ ಭಾರತೀಯರಿಗಿಂತ ನಾವು ನಿಮ್ಮ ನಿರ್ಧಾರಗಳನ್ನ ನಾವು ಹೆಚ್ಚು ಬೆಂಬಲಿಸುತ್ತೀವಿ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಕನ್ನಡಿಗರು ಇಂದು ಬಹುತೇಕ ಪರಭಾಷೆ #stars ಗಳಿಗೆ ಚಪ್ಪಾಳೆ ಹೊಡೆದತಪ್ಪಿಗೆ ನಾವು #ಕನ್ನಡಿಗರು ದಾರಿತಪ್ಪಿದವರಂತೆ
ಆಗಿದ್ದೇವೆ! @narendramodi
Ji!ಉತ್ತರ ಭಾರತದ ನಟನಟಿಯರಿಗಿಂತ ನಾವು ಯಾವುದರಲ್ಲು ಕಮ್ಮಿಇಲ್ಲಾ!
ಶಾರುಖ್ ಅಮಿರ್ ಅಲ್ಲಾ ಕಲಾರಂಗಕ್ಕೆ ಒಡೆಯರು!ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ!ನಿಮ್ಮ ಭಾವನೆ ಗೌರವಿಸಲು!
ಜೈಹಿಂದ್!
— ನವರಸನಾಯಕ ಜಗ್ಗೇಶ್ (@Jaggesh2) October 20, 2019
ಇಂದು ಕರ್ನಾಟಕದಲ್ಲಿ ಹೆಚ್ಚು #Entertainment #tax #collection ಕನ್ನಡದ ನೆಲ ಚಿತ್ರರಂಗದಿಂದ! ನಟರಿಂದ ಆಗುತ್ತಿದೆ!ನೆನಪಿಡಿ!
ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಹ ಹಿಂದಿ ಚಿತ್ರರಂಗದಿಂದ ಅಲ್ಲಾ!ಈ ವಿಷಯ ಮನವರಿಕೆ ಮಾಡುವ
ಕನ್ನಡ ಮನಸ್ಸುಗಳು ಇಲ್ಲವೆ ರಾಷ್ಟ್ರಕ್ಕೆ!ತುಂಬಾ ದುಃಖವಾಯಿತು!
ಖಾನ್ ಗಳಲ್ಲಾ ಚಿತ್ರರಂಗ!
— ನವರಸನಾಯಕ ಜಗ್ಗೇಶ್ (@Jaggesh2) October 20, 2019