Tuesday, August 16, 2022

ನನ್ನ ರಾಜಕೀಯ ಭವಿಷ್ಯದ ಬಗ್ಗೆ ದೇವೇಗೌಡರು ಎಂದು ಯೋಚನೆ ಮಾಡಿಲ್ಲ – ಕುಮಾರಸ್ವಾಮಿ

Must read

ಬೆಂಗಳೂರು: ನನ್ನ ರಾಜಕೀಯ ಭವಿಷ್ಯದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಎಂದು ಯೋಚನೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ದೇವೇಗೌಡರು ಅಭ್ಯರ್ಥಿ ಇಲ್ಲದ ಕಾರಣ ನನಗೆ ಬಿ ಫಾರಂ ಕೊಟ್ಟರು, ಪೂರ್ಣ ಮನಸ್ಸಿನಿಂದ ಅವರು ನನ್ನನ್ನು ರಾಜಕೀಯಕ್ಕೆ ತರಲಿಲ್ಲ, ಈ ಬಗ್ಗೆ ಚರ್ಚೆ ಮಾಡಲು ಬನ್ನಿ ಬೇಕಾದರೆ. ಗಾಂಧಿ ಭವನದಲ್ಲಿ ಚರ್ಚೆಮಾಡಲು ಸಿದ್ಧ, ನನಗೆ ಅಧಿಕಾರದಲ್ಲಿ ಇರಬೇಕೆಂಬ ಹುಚ್ಚಿಲ್ಲ, ಜನರಿಗೆ ಒಳಿತಾಗಬೇಕಿದೆ ಅಷ್ಟೇ, ಸಂತೋಷದಿಂದ ಅಧಿಕಾರ ಬಿಟ್ಟಿದ್ದೇನೆ ಮತ್ತು ರಾಜಕೀಯಕ್ಕೆ ಬಂದು ಆಸ್ತಿ ಮಾಡಿಲ್ಲ ಎಂದು ಕುಮಾರಸ್ವಾಮಿ ನುಡಿದರು.

ನಂತರ ಮಾತು ಮುಂದುವರೆಸಿದ ಅವರು, ಶರತ್ ಬಚ್ಚೇಗೌಡಗೆ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದೇನೆ. ಆದರೆ ಅವರು ನನ್ನ ದಾಯಾದಿ ನಾ? ಅದನ್ನೇ ಬೇರೆ ರೀತಿಯ ಮಾತನಾಡುತ್ತಿದ್ದಾರೆ. ಬಚ್ಚೇಗೌಡರು ನೇರವಾಗಿ ಮಾತನಾಡುತ್ತಾರೆ. ಒಕ್ಕಲಿಗರನ್ನು ಒಡೆಯುವ ಉದ್ದೇಶದಿಂದ ಅವರ ಬಾಯಲ್ಲಿ ಹೇಳಿಕೆ ಕೊಡಿಸಿದರು. ಆದರೆ ಅವರು ಮೊದಲು ನಮ್ಮಲ್ಲೇ ಇದ್ದವರು. ರಾಜಕೀಯದಲ್ಲೂ ಯಾರೂ ಶತ್ರುಗಳಲ್ಲ, ಮಿತ್ರರೂ ಅಲ್ಲ, ಹೀಗಾಗಿ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು.

ಮಹಾಲಕ್ಷ್ಮಿ ಲೇಔಟ್ ಕೆ. ಗೋಪಾಲಯ್ಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗಿಂತ ನಿಮ್ಮೆಲ್ಲರಿಗೂ ಅವರ ಬ್ಯಾಕ್ ಗ್ರೌಂಡ್ ಗೊತ್ತಿದೆ. ಮಹಾಲಕ್ಷ್ಮಿ ಲೇಔಟ್ ನಲ್ಲಿ ನಾವು ಗೆಲ್ಲುತ್ತೇವೆ. ಗೋಪಾಲಯ್ಯ ಎಂತ ವ್ಯಕ್ತಿ ಅದಕ್ಕೆ ಸರಿಸಮನಾದ ವ್ಯಕ್ತಿ ನಿಲ್ಲಿಸಬೇಕು. ಇಲ್ಲವಾದರೆ ರೌಡಿಗಳಿಂದ ಹೆದರಿಸಿ ಓಡಿಸುತ್ತಾನೆ. ಪೊಲೀಸರಿಂದ ಧಮ್ಕಿ ಹಾಕುತ್ತಾನೆ. ಇಲ್ಲಿಂದ ಓಡಿಹೋದ 15 ಜನರೂ ಸೋಲಬೇಕು. ಇದಕ್ಕಾಗಿ ನಾನು ರಣತಂತ್ರ ರೂಪಿಸುತ್ತೇವೆ. ಸಿದ್ದರಾಮಯ್ಯ ಮತ್ತು ನನ್ನ ಮಧ್ಯೆ ಹೋರಾಟ ಬೇರೆ ಆದರೆ ಹದಿನೈದು ಜನರನ್ನು ಸೋಲಿಸುವುದೇ ನನ್ನ ಗುರಿ ಎಂದು ಕುಮಾರಸ್ವಾಮಿ ಹೇಳಿದರು.

Latest article