Tuesday, November 29, 2022

ನನ್ನ ಗಮನದ ಪ್ರಕಾರ ಇದು ಸತ್ಯ – ವಿಜಯೇಂದ್ರ

Must read

ಮೈಸೂರು: ನನ್ನ ಗಮನದ ಪ್ರಕಾರ ರಾಜ್ಯದಲ್ಲಿ ಬೊಕ್ಕಸ ಖಾಲಿಯಾಗಿರೋದು ಸತ್ಯ ಎಂದು ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ವರುಣಾದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಬೊಕ್ಕಸ ಖಾಲಿಯಾಗಿರೋದು ಸತ್ಯ ಆದರೆ ಈ ಬಗ್ಗೆ ಅಧಿಕೃತ ಅಂಕಿಅಂಶಗಳು ನನ್ನಲ್ಲಿ ಇಲ್ಲ. ಬೊಕ್ಕಸದಲ್ಲಿ ಹಣವಿಲ್ಲದಿರೋದು ಯಡಿಯೂರಪ್ಪನವರನ್ನು ಕೈಕಟ್ಟಿ ಹಾಕಿದಂತಾಗಿರೋದು ನಿಜ ಎಂದು ವಿಜಯೇಂದ್ರ ತಿಳಿಸಿದರು.

ಜನಪರ ಯೋಜನೆ ಜಾರಿಗೆ ತರಲು ಯಡಿಯೂರಪ್ಪರಿಂದ ಸಾಧ್ಯವಾಗುತ್ತಿಲ್ಲ. ಇದು ಸಹಜವಾಗಿ ಯಡಿಯೂರಪ್ಪರಿಗೆ ಬೇಸರ ತರಿಸಿದೆ. ಈ ಬೇಸರದ ಮಾತು ಕೆಲವರಿಗೆ ಅಸಹಾಯಕತೆ ದೃಷ್ಟಿಯಲ್ಲಿ ಕಾಣುತ್ತಿದೆ ಎಂದರು.

ಯಡಿಯೂರಪ್ಪನವರು ಅಸಹಾಯಕರಾಗಿಲ್ಲ, ಭವಿಷ್ಯದಲ್ಲಿ ಅವರು ಬೊಕ್ಕಸ ತುಂಬಿಸಲಿದ್ದಾರೆ.

ಜನಪರ ಯೋಜನೆಗಳನ್ನ ಜಾರಿ ಮಾಡುವ ವಿಶ್ವಾಸ ಇದೆ. 5 ವರ್ಷದ ಕಾಂಗ್ರೆಸ್ ಆಡಳಿತ 1.5 ವರ್ಷ ಮೈತ್ರಿ ಆಡಳಿತ. ಇದರಲ್ಲಿ ಬರಿ ಹಗಲು ದರೋಡೆ ನಡೆದಿದೆ. ಇದರಿಂದಾಗಿ ರಾಜ್ಯದ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ. ಹೀಗಾಗಿ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಆದರೂ ಸಹ ನೆರೆ ಪರಿಹಾರಕ್ಕೆ 1500 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಕೇಂದ್ರದಿಂದ ಹಣ ಬರೋದು ವಿಳಂಬವಾಗಿದೆ. ಶೀಘ್ರದಲ್ಲೆ ಪರಿಹಾರ ಬರುವ ನಿರೀಕ್ಷೆ ಇದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

Latest article