Wednesday, May 18, 2022

ನನ್ನ ಕೈ ಕಡಿಯೋದಲ್ಲ, ಎದೆ ಬಗೆದರು ನಾನು ಜನರ ಪರ..! ಅನರ್ಹ ಶಾಸಕ ಸುಧಾಕರ್​

Must read

ಬೆಂಗಳೂರು: ಮಂಚೇನಹಳ್ಳಿ ತಾಲೂಕು ರಚನೆಯ ವಿಷಯದಲ್ಲಿ ನನ್ನ ಕೈಯಲ್ಲ, ಎದೆ ಬಗೆದರು ನನ್ನ ಜನರ ತೀರ್ಮಾನಕ್ಕೆ ನಾನು ಸದಾ ಬದ್ಧನಾಗಿದ್ದೇನೆ ಎಂದು ಅನರ್ಹ ಶಾಸಕ ಡಾ.ಕೆ ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ.

ಇನ್ನು ಮಾಜಿ ಸಚಿವ ಶಿವಶಂಕರರೆಡ್ಡಿ ಕೈ ಕಡಿಯುವ ಹೇಳಿಕೆ ವಿಚಾರವಾಗಿ ಟ್ವೀಟ್ ಮಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದೆಯೇ? ಹಾಗಿದ್ದರೆ ಶಿವಶಂಕರರೆಡ್ಡಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಅವರ ಗೂಂಡಾ ಮನಸ್ಥಿತಿ ಜಗತ್ತಿಗೆ ಅರ್ಥವಾಗಿದೆ. ಸಮಾಜಕ್ಕೆ ಮಾದರಿಯಾಗಬೇಕಾದವರು ಇಂತಹ ಕೀಳುಮಟ್ಟಕ್ಕೆ ಇಳಿದಿರುವುದು ದುರ್ದೈವ ಎಂದು ಸುಧಾಕರ್ ಅವರು ಶಿವಶಂಕರೆಡ್ಡಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಮಾಜಿ ಸಚಿವ ಶಿವಶಂಕರರೆಡ್ಡಿ ಅವರು ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ಮಾಡಿದರೆ ನನಗೆ ಅಭ್ಯಂತರವಿಲ್ಲ. ಆದರೆ, ಗೌರಿಬಿದನೂರು ತಾಲೂಕಿನ ಹೋಬಳಿಗಳನ್ನು ಏನಾದ್ರು ಮುಟ್ಟಿದರೆ ಕೈ ಕಟ್​ ಮಾಡುವುದಾಗಿ ಆವಾಜ್​ ಹಾಕಿದ್ದಲ್ಲದೇ, ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್​ ಪಕ್ಷವನ್ನು ಹಾಳು ಮಾಡಿ ಹೋಗಿದ್ದಾರೆ. ಈಗ ಗೌರಿ ಬಿದನೂರು ನೋಡಲು ಮುಂದಾಗಿದ್ದಾರೆ. ಕೆಲವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದರು. ಇಷ್ಟು ದಿನ ಸುಮ್ಮನಿದ್ದೆ. ಆದರೆ, ಇನ್ನು ಮುಂದೆ ಸುಮ್ಮನಿರುವುದು ಸಾಧ್ಯವಿಲ್ಲ ಎಂದು ಶಿವಶಂಕರರೆಡ್ಡಿ ಅವರು ಹರಿಹಾಯ್ದಿದ್ದರು.

Latest article