Wednesday, May 18, 2022

ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಇಬ್ಬರಿಗೂ ಕೋವಿಡ್​ 19 ಸೋಂಕು ದೃಢ

Must read

ಬೆಂಗಳೂರು: ವಿಶ್ವಾದ್ಯಂತ ಕೋವಿಡ್​ 19 ಆರ್ಭಟ ಜೋರಾಗಿದೆ. ದಿನೇ ದಿನೇ ಈ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಸದ್ಯ ಸ್ಯಾಂಡಲ್​ವುಡ್ ನಟ ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಅವರಿಗೆ ಕೋವಿಡ್​ 19 ಸೋಂಕು ಪತ್ತೆಯಾಗಿದೆ ಎಂದು ಅವರು ತಮ್ಮ ಟ್ವಟಿರ್​ನಲ್ಲಿ ಬರೆದುಕೊಂಡಿದ್ದಾರೆ.

ಬುಧವಾರ ತಮ್ಮ ಅಧಿಕೃತ ಟ್ವಿಟರ್​ ಖಾತೆಯ ಬರೆದುಕೊಂಡಿರುವ ಅವರು, ನಾನು ಮತ್ತು ನನ್ನ ಪತ್ನಿ ಇಬ್ಬರಿಗೂ ಕೋವಿಡ್​ 19 ಪರೀಕ್ಷೆ ನಡೆಸಿದಾಗ ನಮ್ಮಿಬ್ಬರಿಗೂ ಪಾಸಿಟಿವ್​ನ ಸಣ್ಣ ಲಕ್ಷಣಗಳು ಕಂಡು ಬಂದಿದ್ದು ಹೀಗಾಗಿ ನಮ್ಮನ್ನು ಆಸ್ಪತ್ರೆಗೆ ಸೇರಿಸಿಕೊಳ್ಳು ಆಯ್ಕೆ ಮಾಡಲಾಗಿದೆ. ನಾವು ಚೆನ್ನಾಗಿ ಹಿಂತಿರುಗಿ ಬರುತ್ತೇವೆ ಎಂದು ನನಗೆ ಖಾತ್ರಿಯಿದೆ. ನಮ್ಮೊಂದಿಗೆ ಹತ್ತಿರದಲ್ಲಿದ್ದವರೆಲ್ಲರೂ ದಯವಿಟ್ಟು ನಿಮ್ಮನ್ನು ಪರೀಕ್ಷಿಸಿಕೊಳ್ಳಿ ಮತ್ತು ಸುರಕ್ಷಿತವಾಗಿರಿ ಎಂದು ಆ್ಯಕ್ಷನ್​ ಪ್ರಿನ್ಸ್​​ ಧ್ರುವ ಸರ್ಜಾ ಅವರು ಟ್ವಿಟ್​​ ಮಾಡಿ ತಿಳಿಸಿದ್ದಾರೆ.

Latest article