ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಕಾದಂಬರಿ ಆಧಾರಿಸಿ, ಬೆಂಗಳೂರು ಭೂಗತಲೋಕದ ಕಥೆಯನ್ನ ಸಿನಿಮಾ ಮಾಡೋಕ್ಕೆ ಹೊರಟಿರೋದು ಗೊತ್ತೇಯಿದೆ. ಚಿತ್ರದಲ್ಲಿ ಡಾಲಿ ಧನಂಜಯ್ ಮಾಜಿ ಡಾನ್ ಎಂ.ಪಿ ಜಯರಾಜ್ ಪಾತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ. ಆದರೆ, ಸಿನಿಮಾ ಟೈಟಲ್ ಏನು ಅನ್ನೋದು ಮಾತ್ರ ಸೀಕ್ರೆಟ್ ಆಗಿತ್ತು.
ಟಗರು ಸಿನಿಮಾದಲ್ಲಿ ಡಾಲಿಯಾಗಿ ಅಬ್ಬರಿಸಿದ ಧನಂಜಯ ಈಗ ಫುಲ್ ಬ್ಯುಸಿ. ಒಂದರ ಹಿಂದೊಂದರಂತೆ ಧನು ಸಿನಿಮಾಗಳು ಅನೌನ್ಸ್ ಆಗ್ತಾನೆ ಇದೆ. ಸರ್ಪ್ರೈಸಿಂಗ್ ಅನ್ನುವಂತೆ ಕೆಲ ತಿಂಗಳ ಹಿಂದೆ ಮಾಜಿ ಡಾನ್ ಎಂ.ಪಿ ಜಯರಾಜ್ ಬಯೋಪಿಕ್ ಅನೌನ್ಸ್ ಆಗಿತ್ತು. ಆ ಸಿನಿಮಾದಲ್ಲಿ ಡಾಲಿ ಧನಂಜಯ ಜಯರಾಜ್ ಪಾತ್ರಕ್ಕೆ ಬಣ್ಣ ಹಚ್ಚೋದು ಪಕ್ಕಾ ಆಗಿದೆ. ಚಿತ್ರಕ್ಕೆ ಹೆಡ್ ಬುಷ್ ಅನ್ನೋ ಟೈಟಲ್ ಫಿಕ್ಸ್ ಆಗಿದೆ.
Best wishes to the team of #Headbush #headbushthemovie#headbush#mydaysintheunderworld#mpjayaraj #Agnisreedhar@Dhananjayaka#ashubedra#shoonyao#Veenaa#Charanraj#KarmChawla#UllasHydur#RoshanAgnisreedharBachan pic.twitter.com/qL1whH3EDW
— Puneeth Rajkumar (@PuneethRajkumar) August 15, 2020
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹೆಡ್ ಬುಷ್ ಸಿನಿಮಾ ಟೈಟಲ್ ಲಾಂಚ್ ಮಾಡಿದ್ದಾರೆ. ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. 80ರ ದಶಕದಲ್ಲಿ ಬೆಂಗಳೂರಿನ ಅಂಡರ್ವರ್ಲ್ಡ್ಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಡಾಲಿ ಧನಂಜಯ ಅವ್ರನ್ನ ಜಯರಾಜ್ ಪಾತ್ರದಲ್ಲಿ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.
ಹೆಡ್ ಬುಷ್ ಕಥೆಗೆ ಅಶುಬೆದ್ರ ಬಂಡವಾಳ ಹಾಕ್ತಿದ್ರೆ, ಹೊಸ ಪ್ರತಿಭೆ ಶೂನ್ಯ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.. ಕೊರೊನಾ ಹಾವಳಿ ಇಲ್ಲದೇ ಇದ್ದಿದ್ರೆ, ಈಗಾಗಲೇ ಶೂಟಿಂಗ್ ಪ್ರಾರಂಭವಾಗಬೇಕಿತ್ತು. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಆಧರಿಸಿ ಸಿನಿಮಾಗಳು ಬಂದಿದ್ದು, ಆ ಸಾಲಿಗೆ ಹೊಸ ಸೇರ್ಪಡೆ ಹೆಡ್ ಬುಷ್. ಜೋರು ಮಳೆಯ ನಡುವೆ ರೌಡಿಗಳ ಅಟ್ಯಾಕ್ ಚಿತ್ರದ ಜೊತೆಗೆ ಹಾವು ಏಣಿ ಆಟದ ಶೈಲಿಯಲ್ಲಿ ಫಾಂಟ್ ಡಿಸೈನ್ ಮಾಡಿ ಸಿನಿಮಾ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲಿಷ್ ಸೇರಿ ಒಟ್ಟು 6 ಭಾಷೆಗಳಲ್ಲಿ ‘ಹೆಡ್ ಬುಷ್’ ಸಿನಿಮಾ ಬಿಡುಗಡೆ ಆಗುತ್ತೆ ಅನ್ನೋದು ಪುನೀತ್ ರಿವೀಲ್ ಮಾಡಿರೋ ಪೋಸ್ಟರ್ನಲ್ಲಿ ಗೊತ್ತಾಗ್ತಿದೆ. ಪೋಸ್ಟರ್ನಲ್ಲಿ ವಾಲ್ಯೂಮ್ ವನ್ ಅಂತಲೂ ಬರೆದಿದ್ದು, ಹೆಡ್ ಬುಷ್ ಸಿನಿಮಾ ಸೀಕ್ವೆಲ್ ರೂಪದಲ್ಲಿ ಬರೋದು ಕನ್ಫರ್ಮ್ ಆಗಿದೆ. ಕೆಲ ದಿನಗಳಿಂದ ಜಯರಾಜ್ ಪಾತ್ರಕ್ಕಾಗಿ ಧನಂಜಯ ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ.
ಟೈಟಲ್ನಿಂದ್ಲೇ ಜಯರಾಜ್ ಬಯೋಪಿಕ್ ಸಿನಿಮಾ ಕುತೂಹಲ ಕೆರಳಿಸಿದೆ. ಇನ್ನು ಧನಂಜಯ ಕೀ ರೋಲ್ ಪ್ಲೇ ಮಾಡ್ತಿರೋದ್ರಿಂದ ಸಹಜವಾಗಿಯೇ ಸಿನಿಮಾ ಬಗ್ಗೆ ನಿರೀಕ್ಷೆ ದುಪ್ಪಟ್ಟಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಹೆಡ್ಬುಷ್ ಸರಣಿಯ ಮೊದಲ ಸಿನಿಮಾ ತೆರೆಗೆ ಬರಲಿದೆ.