Tuesday, November 29, 2022

ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 57,982 ಕೋವಿಡ್​ 19 ಸೋಂಕು ಪತ್ತೆ, 941 ಮಂದಿ ಸಾವು

Must read

ನವದೆಹಲಿ: ದೇಶದಲ್ಲಿ ಕೋವಿಡ್​ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 57,982 ಹೊಸ ಕೇಸ್​ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 26,47,664ಕ್ಕೆ ಏರಿಕೆಯಾಗಿದ್ರೆ, 941 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 50,921ಕ್ಕೆ ಬಂದು ನಿಂತಿದೆ.

24,61,191 ಮಂದಿ ಸೋಂಕಿತರ ಪೈಕಿ ಒಟ್ಟು ಗುಣಮುಖರಾದವರ ಸಂಖ್ಯೆ 19,19,843ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿನ್ನೂ 6,76,900 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಇನ್ನು ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಕ್ಕೆ 7,040 ಕೋವಿಡ್​-19 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ನಿನ್ನೆ ಸಾವನ್ನಪ್ಪಿದ್ದವರು 124 ಮಂದಿ. ರಾಜ್ಯದಲ್ಲಿ ಒಟ್ಟು 83,191 ಸಕ್ರಿಯ ಪ್ರಕರಣಗಳಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರು 6,683 ಮಂದಿ.

ಬೆಂಗಳೂರಿನಲ್ಲಿಯೇ 2,131 ಪ್ರಕರಣಗಳು ದೃಢಪಟ್ಟಿದ್ದರೆ, ಒಟ್ಟು 34,583 ಸಕ್ರಿಯ ಪ್ರಕರಣಗಳಿದ್ದು, 49 ಮಂದಿ ಸಾವನ್ನಪ್ಪಿದ್ದಾರೆ. 2,359 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

Latest article