Wednesday, May 18, 2022

ದಿಢೀರ್ 150 ಸಿಬ್ಬಂಧಿಗಳ ವಜಾ ಮಾಡಿದ ವಿಮ್ಸ್..!

Must read

ಬಳ್ಳಾರಿ: ಸಣ್ಣ ಸಣ್ಣ ಕನಸು ಕಟ್ಟಿಕೊಂಡು ನಾಲ್ಕು ತಿಂಗಳ ಹಿಂದಷ್ಟೇ ಅವರೆಲ್ಲಾ ನೇಮಕಗೊಂಡಿದ್ದರು. ಆದರೆ ದಿನ ಬೆಳಗಾಗುವಷ್ಟರಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ನಾಲ್ಕು ತಿಂಗಳ ಸಂಬಳವೂ ಇಲ್ಲದೆ, ನೆಚ್ಚಿಕೊಂಡಿದ್ದ ಕೆಲಸವೂ ಇಲ್ಲದೇ 150ಕ್ಕೂ ಹೆಚ್ಚು ಸಿಬ್ಬಂದಿ ಈಗ ಬೀದಿ ಪಾಲಾಗಿದ್ದಾರೆ.

ಜಿಲ್ಲೆಯ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯಾಗಿರುವ ವಿಮ್ಸ್ ಅವ್ಯವಹಾರಗಳ ಕೊಪ. ಔಷಧಿ ಖರೀದಿ, ನೇಮಕಾತಿ ಹಗರಣ. ಹೀಗೆ ಒಂದಲ್ಲ ಎರಡಲ್ಲ. ಸಾಲು ಸಾಲು ಅವ್ಯವಹಾರಗಳು ವಿಮ್ಸ್‌ನಲ್ಲಿ ನಡೆದಿವೆ. ಇದೀಗ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಶಿಯನ್ ಸೇರಿದಂತೆ 150ಕ್ಕೂ ಹೆಚ್ಚು ಸಿಬ್ಬಂದಿಯನ್ನು ಏಕಾಏಕಿ ತೆಗೆದು ಹಾಕಲಾಗಿದೆ.

ನಾಲ್ಕು ತಿಂಗಳ ಹಿಂದಷ್ಟೇ ವಿಮ್ಸ್ ನಿರ್ದೇಶಕ ದಿವಂಗತ ಲಕ್ಷ್ಮೀ ನಾರಾಯಣ ರೆಡ್ಡಿ ನೇಮಕಾತಿ ಮಾಡಿದ್ದರು. ಆದರೆ ಎರಡು ವಾರಗಳ ಹಿಂದಷ್ಟೇ ಲಕ್ಷ್ಮೀ ನಾರಾಯಣರೆಡ್ಡಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಜಾಗಕ್ಕೆ ಬಂದಿರುವ ದೇವಾನಂದ್, ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಕೆಲಸದಿಂದ ತೆಗೆದುಹಾಕಿದ್ದಾರೆ. ಹೀಗಾಗಿ ಕೆಲಸ ಖಾಯಂಗೊಳಿಸುವಂತೆ ನಿರ್ದೇಶಕರ ಕಾಲಿಗೆ ಬಿದ್ದ ಕಾರ್ಮಿಕರು, ಅಳಲು ತೋಡಿಕೊಂಡರು.

ನೇಮಕಾತಿ ವೇಳೆ ಅಭ್ಯರ್ಥಿಗಳಿಂದ ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ದೇವಾನಂದ್ ಹೇಳುತ್ತಿದ್ದಾರೆ. ಆದರೆ, ಇದೇ ನೆಪ ಮುಂದಿಟ್ಟುಕೊಂಡು ನೂತನ ನಿರ್ದೇಶಕರು ಅಭ್ಯರ್ಥಿಗಳ ಬಳಿ ಹಣ ಸುಲಿಯುವ ಯತ್ನವೂ ಇರಬಹುದು ಎಂಬ ಆರೋಪವೂ ಕೇಳಿ ಬಂದಿದೆ.

Latest article