ಕೊಡಗು: ನಾಡಿನೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದೆ, ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ವೈವಿದ್ಯಮಯ ಕಾರ್ಯಕ್ರಮಗಳು ರಂಗೇರಿದ್ದರೆ ಇತ್ತ ಮಂಜಿನ ನಗರಿ ಕೊಡಗಿನ ಐತಿಹಾಸಿಕ ಮಡಿಕೇರಿಯಲ್ಲಿಯೂ ದಸರಾ ಕೂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಮನಸ್ಸಿಗೆ ಮುದನೀಡುವ ಕಾರ್ಯಕ್ರಮಗಳು ಎಲ್ಲರನ್ನು ರಂಜಿಸಿತು.
ಇಂದು ವಿಶೇಷವಾಗಿ ಮಹಿಳೆಯರಿಗಾಗಿಯೇ ನಡೆದ ದಸರಾ ಎಲ್ಲರ ಮನಸೋರೆಗೊಂಡಿತು. ಕೊಡಗಿನ ಡಿಸಿ, ಎಸ್ಪಿ, ಸಿಇಓ ಕೂಡ ಕೊಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚಿದರು. ಎಲ್ಲವನ್ನು ಮರೆತು ಮಹಿಳೆಯರು ಸಂಭ್ರಮಿಸಿ ದಸರಾ ಮಜಾ ಅನುಭವಿಸಿದರು.
ಕೊಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ನಾರಿಯರ ಮಿಂಚಿಂಗ್, ತಾವು ಏನೂ ಕಮ್ಮಿ ಇಲ್ಲ ಎಂದು ಕೊಡಗಿನ ಶೈಲಿಯ ಸ್ಯಾರಿಯಲ್ಲಿ ಮಿಂಚುತ್ತಿರೋ ಕೊಡಗಿನ ಡಿಸಿ, ಎಸ್ಪಿ, ಸಿಇಓ ಮೈದಾನದಲ್ಲಿ ಹಗ್ಗಾ ಜಗ್ಗಾಟವಾಡುತ್ತ ತಮ್ಮ ಶಕ್ತಿ ಪ್ರದರ್ಶನಮಾಡಿರುವುದು ಇಲ್ಲಿ ಕಂಡುಬಂದಿತು.
ಮಹಿಳೆಯರು, ಕೊಡಗಿನ ಸಾಂಪ್ರದಾಯಿಕ ಓಲಗಕ್ಕೆ ಕುಣಿದು ಕುಪ್ಪಳಿಸಿ ನಾರೆಯರು, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಹೊಡೆಯಲು ಪ್ರಯತ್ನಿಸಿದರು. ಡಿಸಿ, ಎಸ್ಪಿ. ಇದರ ಜೊತೆಗೆ ಮೆಹಂದಿ ರಂಗಲ್ಲಿ ಮೈಮರೆಯುವ ಆಂಟೀಸ್, ಸ್ಟೇಜ್ ಮೇಲೆ ರಾಂಪ್ ವಾಕ್ ಮಾಡಿ ಸೈ ಎನಿಸಿಕೊಂಡರು. ವೇದಿಕೆ ಮೇಲೆ ಕುಣಿದು ನಲಿದ ಮಹಿಳೆಯರು ಇವತ್ತು ಮಂಜಿನ ನಗರಿ ಮಡಿಕೇರಿ ದಸರಾದಲ್ಲಿ ಮಹಿಳೆಯರದ್ದೇ ಫುಲ್ ದರ್ಬಾರ್ ಎಂದರೆ ತಪ್ಪಾಗಲಾರದು.
ವಿಶ್ವ ವಿಖ್ಯಾತ ಮೈಸೂರು ದಸರಾ ಬಿಟ್ಟರೆ ರಾಜ್ಯದಲ್ಲಿ ಹೆಸರುವಾಸಿಯಾಗಿರುವುದು ಮಂಜಿನ ನಗರಿ ಮಡಿಕೇರಿ. ಹೀಗಾಗಿ ದಸರಾದಲ್ಲಿ ಇಂದು ನಾರಿಯರ ಆಟ ಹುಡುಗಾಟ, ಸಂಭ್ರಮ ಕಳೆಗಟ್ಟಿತ್ತು. ಮಹಿಳೆಯರಿಗಾಗಿ ಆಯೋಜನೆಗೊಂಡಿದ್ದ ಮಹಿಳಾ ದಸರಾದಲ್ಲಿ ಉತ್ಸಾಹದಿಂದ ಭಾಗಿಯಾದ ಸಾವಿರಾರು ಮಹಿಳೆಯರು ಹಾಡುತ್ತ ಈ ಕಾರ್ಯಕ್ರವನ್ನು ಎಂಜಾಯ್ ಮಾಡಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿಸಿ ಅನ್ನೀಸ್ ಕಣ್ಮಣಿ ಜಾಯ್, ಎಸ್ಪಿ ಸುಮನಾ, ಸಿಇಓ ಲಕ್ಷ್ಮೀಪ್ರಿಯ ಕೂಡ ಮಡಿಕೆ ಓಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಿ, ಕೈಗೆ ಮೆಹಂದಿ ಹಾಕಿಸಿಕೊಂಡು ಎಂಜಾಯ್ ಮಾಡಿರುವುದು ಸಹ ಅಲ್ಲಿ ಕಂಡುಬಂದಿತು.
ಇಲ್ಲಿ ಮಹಿಳೆಯರಿಗಾಗಿ 10 ಕ್ಕೂ ಹೆಚ್ಚು ಬಗೆಯ ವಿವಿಧ ಸ್ಪರ್ಧೆಗಳು ಆಟೋಟಗಳನ್ನು ಏರ್ಪಾಡು ಮಾಡಲಾಗಿತ್ತು. ಎಲ್ಲಾ ಸ್ಪರ್ಧೆಗಳಲ್ಲಿಯೂ ಉತ್ಸಾಹದಿಂದ ಪಾಲ್ಗೊಂಡ ಮಹಿಳೆಯರು ಇಡೀ ದಿನ ತಮ್ಮ ಪ್ರತಿಭೆಯನ್ನು ಹೊರಹಾಕಿ ಎಲ್ಲರೊಂದಿಗೆ ಬೆರೆತು ಸಂಭ್ರಮಿಸಿದರು.
ಒಟ್ಟಿನಲ್ಲಿ ದಸರಾ ಅಂದರೆ ಸಂಭ್ರಮ, ಜಾತಿ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಸೇರಿ ಹಬ್ಬ ಆಚರಣೆ ಮಾಡುವ ಸಡಗರವಾಗಿದ್ದು, ಈ ನಡುವೆ ಮಹಿಳೆಯರಿಗಾಗಿಯೇ ನಡೆದ ಮಹಿಳಾ ದಸರಾ, ಮಹಿಳೆಯರನ್ನು ಒಂದೆಡೆ ಸೇರಿಸಿ ಸಂಭ್ರಮಿಸಲು ವೇದಿಕೆ ಒದಗಿಸಿತ್ತು, ಎಲ್ಲವನ್ನು ಮೈಮರೆತು ಹಾಡಿ ನಲಿದ ಮಹಿಳೆಯರು ತಮ್ಮೆಲ್ಲಾ ಜಂಜಾಟ ಮರೆತು ಸಂಭ್ರಮದ ಅಲೆಯಲ್ಲಿ ತೇಲಿದರು.