Thursday, January 20, 2022

ದಬಾಂಗ್-3 ಸಿನಿಮಾದ ಟೈಟಲ್ ಸಾಂಗ್ ರಿಲೀಸ್

Must read

ಸಲ್ಮಾನ್​ ಖಾನ್​, ಸೋನಾಕ್ಷಿ ಸಿನ್ಹಾ ಅಭಿನಯದ ದಬಾಂಗ್​-3 ಚಿತ್ರದ ಟೈಟಲ್​ ಸಾಂಗ್​ ರಿಲೀಸ್​ ಆಗಿದೆ. ದಬಾಂಗ್​ ಸರಣಿಯ ಹಿಂದಿನ ಎರಡೂ ಸಿನಿಮಾಗಳಲ್ಲಿ ಟೈಟಲ್​ ಸಾಂಗ್​ ಹೈಲೆಟ್​ ಆಗಿತ್ತು. ಅದಕ್ಕಿಂತ ಭಿನ್ನವಾಗಿ ಈ ಬಾರಿ ಸಾಂಗ್​ ಮಾಡಿದ್ದು, ಸಲ್ಲುಮಿಯಾ ಅಭಿಮಾನಿಗಳಿಗೆ ಸಾಂಗ್​ ಕಿಕ್​ ಕೊಡ್ತಿದೆ. ಹಾಡಿಗೆ ಸಾಜಿದ್​ ವಾಜಿದ್​ ಟ್ಯೂನ್ ಹಾಕಿದ್ರೆ, ಜಲೀಶ್​ ಶೆರ್ವಾಣಿ ಲಿರಿಕ್ಸ್​ ಬರೆದಿದ್ದಾರೆ. ದಿವ್ಯ ಕುಮಾರ್​, ಶಬಾಬ್​ ಸಬ್ರಿ ಹಾಡನ್ನ ಹಾಡಿದ್ದಾರೆ. ದಬಾಂಗ್​-3 ಚಿತ್ರದಲ್ಲಿ ಕಿಚ್ಚ ಸುದೀಪ್​ ಖಳನಾಯಕನಾಗಿ ನಟಿಸಿರೋ ವಿಶೇಷ.

ಅಲ್ಲು ಅರ್ಜುನ್​ ಮಕ್ಕಳ ಡ್ಯಾನ್ಸ್​ ಸೂಪರ್

ಮಕ್ಕಳ ದಿನಾಚರಣೆ ವಿಶೇಷವಾಗಿ ತೆಲುಗಿನ ‘ಅಲಾ ವೈಕುಂಠಪುರಮು ಲೋ’ ಚಿತ್ರದ ‘ಓ ಮೈ ಡ್ಯಾಡಿ’ ಅನ್ನೋ ಸಾಂಗ್​ ಟೀಸರ್​ ರಿಲೀಸ್​ ಆಗಿದೆ. ತ್ರಿವಿಕ್ರಮ್​ ಶ್ರೀನಿವಾಸ್​ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್​, ಪೂಜಾ ಹೆಗ್ಡೆ ನಟಿಸ್ತಿದ್ದಾರೆ. ಸದ್ಯ ರಿಲೀಸ್​ ಆಗಿರೋ ಸಾಂಗ್​ ಟೀಸರ್​ನಲ್ಲಿ ಅಲ್ಲು ಅರ್ಜುನ್​ ಮಗ ಅಲ್ಲು ಅಯಾನ್​ ಮತ್ತು ಮಗಳು ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾರೆ. ‘ಅಲಾ ವೈಕುಂಠಪುರಮು ಲೋ’ ಚಿತ್ರ ಸಂಕ್ರಾಂತಿಗೆ ತೆರೆಗೆ ಬರಲಿದೆ.

​​

ಮರ್ದಾನಿ-2 ಟ್ರೈಲರ್ ರಿಲೀಸ್

ರಾಣಿ ಮುಖರ್ಜಿ ಅಭಿನಯದ ಮರ್ದಾನಿ ಸಿನಿಮಾ ಸೀಕ್ವೆಲ್​​ ಟ್ರೈಲರ್​ ರಿಲೀಸ್ ಆಗಿದೆ. ಮತ್ತೊಮ್ಮೆ ರಾಣಿ ಮುಖರ್ಜಿ ಖಾಕಿ ತೊಟ್ಟು ಅಪರಾಧಿಗಳನ್ನ ಹೆಡೆಮುರಿ ಕಟ್ಟೋಕ್ಕೆ ಬಂದಿದ್ದಾರೆ. ಗೋಪಿ ಪುತ್ರನ್ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದು, ನೈಜ ಘಟನೆಗಳನ್ನ ಆಧರಿಸಿ, ಈ ಚಿತ್ರವನ್ನ ಕಟ್ಟಿಕೊಡಲಾಗ್ತಿದೆ. ಶ್ರುತಿ ಬಾಪ್ನಾ, ವಿಕ್ರಂ ಸಿಂಗ್ ಚೌಹಾನ್, ಚಿತ್ರದ ಮುಖ್ಯಭೂಮಿಕೆಯಲ್ಲಿದ್ದು, ಡಿಸೆಂಬರ್ 13ಕ್ಕೆ ಮರ್ದಾನಿ-2 ಸಿನಿಮಾ ತೆರೆಗೆ ಬರಲಿದೆ.

ಮಿಲಿಯನ್​ ವೀವ್ಸ್​ ಸಾಧಿಸಿದ ‘ದಮಯಂತಿ’ ಟ್ರೈಲರ್

ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಂಯತಿ ಸಿನಿಮಾ ಟ್ರೈಲರ್​, ಮೊನ್ನೆಯಷ್ಟೆ ರಿಲೀಸ್​ ಆಗಿದ್ದು, ಟೀಸರ್​​ ಒಂದು ಮಿಲಿಯನ್ ವೀವ್ಸ್​ ಸಾಧಿಸಿದೆ. ಚಾಲೆಂಜಿಂಗ್​ ಸ್ಟಾರ್ ದರ್ಶನ್​ ದಮಯಂತಿ ಟ್ರೈಲರ್​ನ ಲಾಂಚ್​ ಮಾಡಿದ್ರು. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲೂ ಸಿನಿಮಾ ಮೂಡಿಬರ್ತಿದ್ದು, ರಾಧಿಕಾ ಕುಮಾರಸ್ವಾಮಿ ಪವರ್​ಫುಲ್​ ರೋಲ್​ನಲ್ಲಿ ಮಿಂಚಿದ್ದಾರೆ. ನವೆಂಬರ್ 29ಕ್ಕೆ ದಮಯಂತಿ ಸಿನಿಮಾ ತೆರೆಗಪ್ಪಳಿಸಲಿದೆ.

Also read:  'ತಜ್ಞರ ವರದಿ ಬಹಿರಂಗಪಡಿಸಿ ಜನರ ಆತಂಕ ದ್ವಿಗುಣಗೊಳಿಸೋದು ನನಗೆ ಇಷ್ಟವಿಲ್ಲ'

Latest article