Wednesday, May 18, 2022

ತೆಲುಗಿನ ಖ್ಯಾತ ಕಾಮೆಡಿಯನ್ ವೇಣುಮಾಧವ್ ಇನ್ನಿಲ್ಲ..

Must read

ತೆಲುಗಿನ ಖ್ಯಾತ ಕಾಮೆಡಿಯನ್ ವೇಣುಮಾಧವ್ ವಿಧಿವಶರಾಗಿದ್ದಾರೆ. 50 ವರ್ಷದ ವೇಣು ಮಾಧವ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಕಳೆದ ವಾರದಿಂದ ಯಶೋಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ವೇಣುಮಾಧವ್ ನಿಧನರಾಗಿದ್ದಾರೆ.

ಸಾಂಪ್ರದಾಯಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ವೇಣು, ಎಲ್ಲಾ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಮಾಸ್ಟರ್, ತೊಲಿಪ್ರೇಮ ಚಿತ್ರಗಳು ಇವರ ಜೀವನಕ್ಕೆ ತಿರುವು ನೀಡಿದ ಚಿತ್ರಗಳಾಗಿದೆ. ನಟ, ಹಾಸ್ಯ ಕಲಾವಿದ, ಮಿಮಿಕ್ರಿ ಆರ್ಟಿಸ್ಟ್, ಟಿವಿ ನಿರೂಪಕನಾಗಿಯೂ ವೇಣು ಮಾಧವ್ ಗುರುತಿಸಿಕೊಂಡಿದ್ದು, ನಾಯಕನಟನಾಗಿ ಹಂಗಾಮ, ಭೂಕೈಲಾಸ್, ಪ್ರೇಮಾಭಿಷೇಕಂ ಚಿತ್ರಗಳಲ್ಲಿ ನಟಿಸಿದ್ದಾರೆ.

ಚಿರಂಜೀವಿ, ಬಾಲಕೃಷ್ಣ, ಪ್ರಭಾಸ್, ವೆಂಕಟೇಶ್, ಜೂ. ಎನ್ ಟಿಆರ್, ನಿತಿನ್, ರವಿತೇಜಾ ಸೇರಿದಂತೆ ಬಹುತೇಕ ಎಲ್ಲಾ ಸ್ಟಾರ್ ಗಳ ಜೊತೆ ವೇಣು ನಟನೆ ಮಾಡಿದ್ದು, ವೇಣು ಮಾಧವ್ ಸಾವಿಗೆ ಇಡೀ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ.

Latest article