Sunday, October 2, 2022

ಡಿ ಬಾಸ್ ಸಾಮಾಜಿಕ ಕಳಕಳಿಗೆ ಅಭಿಮಾನಿಗಳು ಹೇಳಿದ್ರು ಬಹುಪರಾಕ್..!

Must read

ರೈತನಾಗಿಯೇ ಕಾಯಕ ಶುರು ಮಾಡಿದ ಡಿ ಬಾಸ್ ದರ್ಶನ್ ಮೊದ ಮೊದಲು ಬದುಕು ಕಟ್ಟಿಕೊಂಡಿದ್ದೇ ಹಾಲಿನಿಂದ. ದಚ್ಚು ಸೂಪರ್ ಸ್ಟಾರ್ ಆದ ಮೇಲೂ ರೈತರ ಮೇಲೆ ಅದೇ ಕಾಳಜಿ, ಅದೇ ಗೌರವ. ಸದ್ಯ ಲಾಕ್ಡೌನ್ನಿಂದ ಕಂಗಾಲಾಗಿರೋ ರೈತರ ಪರ ದಾಸ ದರ್ಶನ್ ದನಿ ಎತ್ತಿದ್ದಾರೆ.

ರೈತರ ಪರ ಡಿ ಬಾಸ್ ದಚ್ಚು ಚಾಲೆಂಜಿಂಗ್ ಟಾಸ್ಕ್

ಅನ್ನದಾತನ ಅನ್ನಕ್ಕೆ ಕನ್ನ ಹಾಕಿದ ಕೊರೊನಾ ವೈರಸ್

ಪ್ರಾಣಿ, ಪಕ್ಷಿಗಳು ಸೇರಿದಂತೆ ಮೂಕ ಜೀವಿಗಳ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ರಿಗೆ ಎಲ್ಲಿಲ್ಲದ ಪ್ರೀತಿ- ವಾತ್ಸಲ್ಯ. ಅದಕ್ಕೆ ಸಾಕಷ್ಟು ನಿದರ್ಶನಗಳು ಕೂಡ ಇವೆ. ಆದ್ರೆ ಅನ್ನ ಕೊಡೋ ರೈತರನ್ನ ದೇವರಂತೆ ಭಾವಿಸೋ ದರ್ಶನ್, ಅವ್ರ ಮೇಲೆ ತೋರೋ ಕಾಳಜಿಯೇ ಬೇರೆ. ಹೌದು.. ಆರಂಭದ ದಿನಗಳಲ್ಲಿ ಹಸುಗಳನ್ನ ಸಾಕಿ ಹಾಲಿನಿಂದಲೇ ಬದುಕು ಕಟ್ಟಿಕೊಳ್ತಿದ್ದ ದರ್ಶನ್ಗೆ ಇಂದಿಗೂ ರೈತರ ಬಗ್ಗೆ ಅದೇ ಗೌರವ.

ಸದ್ಯ ಇಂಡಿಯಾ ಲಾಕ್ಡೌನ್ ಹಿನ್ನೆಲೆ ಜನ ಜೀವನ ಅಸ್ತವ್ಯಸ್ತವಾಗಿಬಿಟ್ಟಿದೆ. ಅದರಲ್ಲೂ ಅನ್ನ ಕೊಡೋ ರೈತನ ಅನ್ನವೇ ಕೇಳುವವರಿಲ್ಲದಂತಾಗಿದೆ. ಮಾರ್ಕೆಟ್ಗಳ ಸ್ಥಳಾಂತರ, ರಸ್ತೆಗಳ ಬಿಗ್ ಬಂದೋಬಸ್ತ್, ಕ್ಲಿಷ್ಟ ಕಾನೂನು ಕ್ರಮಗಳಿಂದ ರೈತ ಕಂಗಾಲಾಗ್ತಿದ್ದಾನೆ. ಬೆಳೆದ ಬೆಳೆ ಮಾರಾಟ ಮಾಡಲಾಗದೆ, ಚರಂಡಿ, ಬೀದಿಗೆ ಸುರಿಯುವ ಪರಿಸ್ಥಿತಿ ಎದುರಾಗಿದೆ. ಆದರೆ ಒಂದಷ್ಟು ಕಡೆ ಸರ್ಕಾರದ ಕಾನೂನುಗಳನ್ನೂ ಲೆಕ್ಕಿಸದೆ ರೈತರಿಂದ ಜನ ನೇರವಾಗಿ ತರಕಾರಿ, ಹಣ್ಣು- ಹಂಪಲು ಖರೀದಿಗೆ ಮುಂದಾಗಿದ್ದಾರೆ.

ಇನ್ನು ಡಿ ಬಾಸ್ ದರ್ಶನ್ ಕೂಡ ಈ ಬೆಳವಣಿಗೆಗೆ ಕೈ ಜೋಡಿಸ್ತಿದ್ದಾರೆ. ರೈತರಿಂದಲೇ ಗ್ರಾಹಕರು ತರಕಾರಿಯನ್ನ ನೇರವಾಗಿ ಖರೀದಿಸಿ ಅಂತ ಸಾಮಾಜಿಕ ಸಂದೇಶ ನೀಡಿದ್ದಾರೆ.

ರೈತರ ಪರ ಸ್ಯಾಂಡಲ್ವುಡ್ ಯಜಮಾನನ ಕಾಳಜಿಗೆ ಅವ್ರ ಅಭಿಮಾನಿಗಳು ದಿಲ್ಖುಷ್ ಆಗಿದ್ದು, ಇಡೀ ಕರುನಾಡು ಇದಕ್ಕೆ ಸಾಥ್ ಕೊಡೋ ಭರವಸೆ ಕೊಡ್ತಿದೆ. ಆದ್ರೆ ಅದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದು ಕಾದುನೋಡಬೇಕಿದೆ.

Also read:  'ಯಡಿಯೂರಪ್ಪ ಅದೃಷ್ಟದ ಮುಖ್ಯಮಂತ್ರಿ, ಅವ್ರು ಬಂದ್ಮೇಲೆ ಕೆರೆ ಕಟ್ಟೆ ತುಂಬಿದ್ದು'

ಈ ಹಿಂದೆ ದರ್ಶನ್ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿರೋರ ಪರ ಜನರಲ್ಲಿ ಮಾಡಿದ್ದ ಮನವಿಯನ್ನ ಸ್ಮರಿಸುವುದಾದರೆ,

ಅಷ್ಟೇ ಅಲ್ಲ, ಜನತಾ ಕರ್ಫ್ಯೂ ನಂತರ ಲಾಕ್ಡೌನ್ ದಿನಗಳಲ್ಲಿ ಮೋದಿ ಕರೆಕೊಟ್ಟ ಬೆಳಕಿನ ಕ್ರಾಂತಿಗೂ ದರ್ಶನ್ ಬೆಂಬಲ ಸೂಚಿಸಿದ್ದರು. ಎಲ್ಲರಿಗೂ ದೀಪ ಬೆಳಗಲು ಸೂಚಿಸಿದ್ದರು.

Also read:  ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಒತ್ತಾಯಿಸಿ ಗಣಿ ಮಾಲೀಕರ ಪ್ರತಿಭಟನೆ

ಹೀಗೆ ದರ್ಶನ್ ಮನೆಯಲ್ಲೇ ಇದ್ದು, ಸಾಮಾಜಿಕ ಸಂದೇಶಗಳನ್ನ ನೀಡುತ್ತಾ, ಅಭಿಮಾನಿಗಳ ಸಾಮಾಜಿಕ ಕೆಲಸಗಳಿಗೂ ಬೆಂಬಲ ಸೂಚಿಸ್ತಿರೋದು ವಿಶೇಷ. ಇನ್ನು ರಾಬರ್ಟ್ ರಿಲೀಸ್ ಕುತೂಹಲ ಮತ್ತಷ್ಟು ಬಿಗಡಾಯಿಸಿದ್ದು, ಚಿತ್ರತಂಡವೇ ಅಧಿಕೃತವಾಗಿ ಅನೌನ್ಸ್ ಮಾಡಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಹೆಡ್, ಟಿವಿ5

Latest article