Tuesday, November 29, 2022

ಟ್ವೀಟ್ ಮೂಲಕ ವಿವಾದಕ್ಕೆ ತೇಪೆ ಹಚ್ಚಲು ಹೊರಟ ವಿಜಯೇಂದ್ರ..!

Must read

ಬೆಂಗಳೂರು: ಆಡಳಿತದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ‌ ವಿಜಯೇಂದ್ರ ಹಸ್ತಕ್ಷೇಪ ಮತ್ತೆ ಶುರುವಾಯಿತಾ ?ಎಂಬ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆ ಟ್ವೀಟ್ ಮೂಲಕ ಸಮಜಾಯಿಷಿ ನೀಡಿ ತೇಪೆ ಹೆಚ್ಚುವ ಕೆಲಸವನ್ನು ವಿಜಯೇಂದ್ರ ಮಾಡಿದ್ದಾರೆ.

ಸಂಜಯ್ ನಗರದ ಬಿಎಂಆರ್‌ಡಿ ಕಚೇರಿಯಲ್ಲಿ ಲಂಡನ್ ನಿಂದ ಆಗಮಿಸಿದ್ದ ಸಂಚಾರ ತಜ್ಞರೊಂದಿಗೆ, ಬೆಂಗಳೂರಿನ ವಾಹನದಟ್ಟಣೆ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಬಿಪ್ಯಾಕ್ ಸಭೆ ನಡೆಸಿತು.ಇದರಲ್ಲಿ ವಿಜಯೇಂದ್ರ ಭಾಗಿಯಾಗಿದ್ದು ಭಾರೀ ಟೀಕೆಗೆ ಒಳಗಾಯಿತು ಇದರಿಂದ ಎಚ್ಚತ್ತ ವಿಜಯೇಂದ್ರ ಕೂಡಲೇ ಬಿಪ್ಯಾಕ್ ಆಯೋಜಿಸಿದ್ದ ಚರ್ಚೆ ಕಾರ್ಯಕ್ರಮದಲ್ಲಿ, ಮಿತ್ರರಾದ ಆರ್.ಕೆ.ಮಿಶ್ರಾ, ಯುನೈಟೆಡ್ ವೇ ಸಂಸ್ಥೆಯ ಪ್ರಶಾಂತ್ ಪ್ರಕಾಶ್ ಮೊದಲಾದವರೊಂದಿಗೆ ನಗರದ ಒಬ್ಬ ಸಾಮಾನ್ಯ ನಾಗರಿಕನಾಗಿ ಭಾಗವಹಿಸಿದ್ದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಸಭೆಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ್, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಲವಾರು ಉನ್ನತ ಅಧಿಕಾರಿಗಳು, ಪರಿಣತರು, ತಜ್ಞರು, ಸಕ್ರಿಯ ನಾಗರಿಕರು ಪಾಲ್ಗೊಂಡಿದ್ದರು.

ಬೆಂಗಳೂರು ನಗರದ ವಾಹನದಟ್ಟಣೆ ಸಮಸ್ಯೆ ಎದುರಿಸಲು ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು ಎಂದು ಸಭೆಯಲ್ಲಿ ಭಾಗಿಯಾಗಿದ್ದನ್ನು ಸಮರ್ಥಿಸಿಕೊಂಡು ಸ್ಪಷ್ಟೀಕರಣವನ್ನೂ ನೀಡಿ ವಿವಾದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

Latest article