Wednesday, May 18, 2022

'ಟಿಪ್ಪು ಸುಲ್ತಾನ್​ಗೆ ಎರಡು ಮುಖವಿದೆ ಇತಿಹಾಸದಲ್ಲಿ ಸತ್ಯ ಬರೆಯಬೇಕು'

Must read

ಉಡುಪಿ: ಟಿಪ್ಪು ಸುಲ್ತಾನ್​ ವಿವಾದಿತ ವ್ಯಕ್ತಿ ಎಂದು ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿ ಅವರು ಗುರುವಾರ ಹೇಳಿದರು.

ಈ ಸಂಬಂಧವಾಗಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕೊಡಗಿನಲ್ಲಿ ಟಿಪ್ಪುವಿನಿಂದ ಹತ್ಯಾಕಾಂಡ ಆಗಿದೆ. ವಿವಾದಿತರ ಜಯಂತಿ ಸರಿಯಲ್ಲ. ಟಿಪ್ಪು ಒಳ್ಳೆಯ ಕೆಲಸ ಕೂಡಾ ಮಾಡಿದ್ದಾನೆ. ಹಲವು ಕೆಟ್ಟ ಕೆಲಸವನ್ನೂ ಮಾಡಿದ್ದಾನೆ ಎಂದು ಅವರು ತಿಳಿಸಿದರು.

ಇನ್ನು ಟಿಪ್ಪು ಬಗ್ಗೆ ಪಠ್ಯದಲ್ಲಿ ಸತ್ಯದ ವಿಚಾರ ಬರೆಯಬೇಕು. ಟಿಪ್ಪು ಸುಲ್ತಾನ್​ನಿಗೆ ಎರಡು ಮುಖವಿದೆ. ಇತಿಹಾಸದಲ್ಲಿ ಸತ್ಯಾಂಶ ಬರೆಯಬೇಕು. ವಿವಾದಿತ ವ್ಯಕ್ತಿಯ ವಿಚಾರ ಸತ್ಯ ನಿಷ್ಠುರವಾಗಿರಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್​ನಿಂದ ಅಯೋಧ್ಯೆಯ ತೀರ್ಪು ಶೀಘ್ರದಲ್ಲಿ ಹೊರ ಬರಲಿದೆ. ಹಿಂದೂಗಳ ಪರ ತೀರ್ಪು ಬಂದರೆ ವಿಜಯೋತ್ಸವ ಬೇಡ. ಬೀದಿಗಿಳಿದು ಮೆರವಣಿಗೆ ಮಾಡಬಾರದು. ಶಾಂತವಾಗಿ ಸ್ವೀಕರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್​ ಹೇಳಿದೆ. ದೇವಸ್ಥಾನ, ಮಠದ ಒಳಗೆ ಹರ್ಷಾಚರಣೆ ಮಾಡಿದರೆ ಸಾಕು ಎಂದು ಪೇಜಾವರ ಶ್ರೀಗಳು ತಿಳಿಸಿದರು.

Latest article