Tuesday, August 16, 2022

ಜೂನ್ ಬಳಿಕವೇ ಶುರುವಾಗಲಿದೆ ಕನ್ನಡ ಸಿನಿ ಜಾತ್ರೆ : ಪೋಸ್ಟ್‌ಪೋನ್ ಆಯ್ತು ರಾಕಿಭಾಯ್ ದರುಶನ..!

Must read

ಮತ್ತೆ ಸಿನಿಮಾ ಸ್ಕ್ರೀನಿಂಗ್ ಯಾವಾಗ ಶುರುವಾಗುತ್ತೆ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ, ಈ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಹೇಳೋದು ಕಷ್ಟ. ಒಂದು ವೇಳೆ ಜೂನ್‌ನಲ್ಲಿ ಸಿನಿಮಾ ರಿಲೀಸ್ ಆದ್ರು, ಮತ್ತೆ ಪ್ರೇಕ್ಷಕರು ಸಿನಿಮಾ ನೋಡೋಕ್ಕೆ ಮುಗಿಬೀಳ್ತಾರಾ..? ಹೇಳೋಕ್ಕಾಗಲ್ಲ.

‘ರಾಬರ್ಟ್’ ಮೇಲೆ ಬಿದ್ದಿದೆ ಇಡೀ ಸ್ಯಾಂಡಲ್ವುಡ್ ಕಣ್ಣು..!

ತತ್ತರಿಸಿರೋ ಚಿತ್ರರಂಗಕ್ಕೆ ಮರುಜೀವ ನೀಡುತ್ತಾ ರಾಬರ್ಟ್..?

ಸಿನಿಮಾ ರಿಲೀಸ್ ಆದ ತಕ್ಷಣ ಪ್ರೇಕ್ಷಕರು ಥಿಯೇಟರ್ಗೆ ಬರೋದಿಲ್ಲ. ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕಾಗಿರೋದ್ರಿಂದ ಹಿಂದೇಟು ಹಾಕೋದೇ ಹೆಚ್ಚು. ಮೊದಲೆರಡು ವಾರ ಒಳ್ಳೆ ಪ್ರತಿಕ್ರಿಯೆ ಸಿಗದೇ ಇದ್ರು, ನಂತ್ರ ಚೇತರಿಸಿಕೊಳ್ಳೊ ಸಾಧ್ಯತೆಯಿದೆ. ಅದಕ್ಕೆ ದೊಡ್ಡ ಸಿನಿಮಾಗಳು ರಿಲೀಸ್ ಆಗ್ಬೇಕು. ಸ್ಯಾಂಡಲ್ವುಡ್ ಮಟ್ಟಿಗೆ ರಿಲೀಸ್ಗೆ ಸಿದ್ಧವಾಗಿರೋ ದೊಡ್ಡ ಸಿನಿಮಾಗಳ ಸಾಲಿನಲ್ಲಿ ಮೊದಲಿಗೆ ನಿಲ್ಲೋ ಸಿನಿಮಾ ರಾಬರ್ಟ್. ಹಾಗಾಗಿ ರಾಬರ್ಟ್ ಸಿನಿಮಾ ರಿಲೀಸ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಜೂನ್ಗೆ ರಾಬರ್ಟ್.. ಆಗಸ್ಟ್ನಲ್ಲಿ ಪೊಗರು ಮತ್ತು K3

ಅಕ್ಟೋಬರ್ನಲ್ಲಿ ಯುವರತ್ನ.. ಮುಂದಿನ ವರ್ಷ KGF-2

ಎಲ್ಲಾ ಅಂದುಕೊಂಡಂತೆ ಆದ್ರೆ, ಜುಲೈ ವೇಳೆಗೆ ರಾಬರ್ಟ್ ಸಿನಿಮಾ ರಿಲೀಸ್ ಆಗಲಿದೆ. ಆಗಸ್ಟ್ ಹೊತ್ತಿಗೆ ಕೋಟಿಗೊಬ್ಬ-3 ಮತ್ತು ಪೊಗರು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲಿದೆ. ಇನ್ನು ಯುವರತ್ನನ ದರ್ಶನ ಆಗೋಕ್ಕೆ ಅಕ್ಟೋಬರ್ವರೆಗೆ ಕಾಯ್ಬೇಕೇನೋ. ದಸರಾಗೆ ಬರಬೇಕಿರೋ ಕೆಜಿಎಫ್-2 ಮುಂದಿನ ವರ್ಷಕ್ಕೆ ಪೋಸ್ಟ್ಪೋನ್ ಆದ್ರು ಅಚ್ಚರಿ ಪಡ್ಬೇಕ್ಕಾಗಿಲ್ಲ. ಒಟ್ನಲ್ಲಿ ಎಲ್ಲಾ ಸಿನಿಮಾಗಳ ರಿಲೀಸ್ ರೀಶೆಡ್ಯೂಲ್ ಆಗಲಿದೆ.

ರಾಬರ್ಟ್ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಡಿ ಬಾಸ್ ವೆರೈಟಿ ವೆರೈಟಿ ಲುಕ್ಗಳಲ್ಲಿ ಕಾಣಿಸಿಕೊಂಡಿದ್ದು, ಭಾರೀ ಕುತೂಹಲ ಮೂಡಿಸಿದೆ. ಉಮಾಪತಿ ಶ್ರೀನಿವಾಸ್ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಿದ್ದು, ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪೋಸ್ಟರ್ಸ್, ಟೀಸರ್, ಲಿರಿಕಲ್ ಸಾಂಗ್ಸ್ನಿಂದ ಬೇಜಾನ್ ಹವಾ ಕ್ರಿಯೇಟ್ ಮಾಡಿದೆ ಸಿನಿಮಾ. ಕೊರೊನಾ ಹೊಡೆತದಿಂದ ನೆಲಕಚ್ಚಿರೋ ಚಿತ್ರರಂಗಕ್ಕೆ ಚೈತನ್ಯ ತುಂಬೋಕ್ಕೆ ರಾಬರ್ಟ್ ಬರಬೇಕಿದೆ. ಪ್ರೇಕ್ಷಕರನ್ನ ರಂಜಿಸೋಕ್ಕೆ ಮತ್ತೆ ಸಿನಿ ಇಂಡಸ್ಟ್ರಿ ಫೀನಿಕ್ಸ್ನಂತೆ ಎದ್ದು ಬರಲಿದೆ.

Also read:  ಅರಣ್ಯ ಸಚಿವರಿಗೆ ಕೊಡಗು ಅಂದ್ರೆ ಭಯಾನಾ..? ಉಮೇಶ್ ಕತ್ತಿಗೆ ಖಡಕ್​ ಪ್ರಶ್ನೆ

ನಾಣಿ.. ಎಂಟ್ರಟ್ರೈನ್ಮೆಂಟ್ ಬ್ಯೂರೋ, ಟಿವಿ5

Latest article