Thursday, May 19, 2022

'ಜೀವ ಮತ್ತು ಜೀವನ’ ಎರಡನ್ನೂ ಉಳಿಸುವುದು ಮುಖ್ಯ – ವಿಪಕ್ಷ ನಾಯಕ ಸಿದ್ದರಾಮಯ್ಯ

Must read

ಬೆಂಗಳೂರು: ಕೋವಿಡ್ -19 ವೈರಸ್ ನಿಂದ ‘ಜೀವ ಮತ್ತು ಜೀವನ’ ಎರಡನ್ನೂ ಉಳಿಸುವುದು ಮುಖ್ಯ. ಈ ವರೆಗಿನ ಕೋವಿಡ್ -19 ವೈರಸ್ ನಿಂದ ‘ಜೀವ ಮತ್ತು ಜೀವನ’ ಎರಡನ್ನೂ ಉಳಿಸುವುದು ಮುಖ್ಯ. ಈ ವರೆಗಿನ ರಾಜ್ಯ ಮುಖ್ಯಮಂತ್ರಿಗಳ ಪ್ರಯತ್ನಗಳು ಜೀವ ಉಳಿಸುವ ಬಗ್ಗೆಯೇ ಹೆಚ್ಚು ಕೇಂದ್ರಿತವಾಗಿದೆ. ‘’ಜೀವನ’’ ರಕ್ಷಿಸುವ ಪ್ರಯತ್ನ ಮಾಡದೆ ಇದ್ದರೆ ರೋಗಕ್ಕಿಂತ ಹಸಿವಿನಿಂದ ಹೆಚ್ಚು ಜನ ಜೀವ ಕಳೆದುಕೊಳ್ಳಬಹುದು ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ.

ತಮ್ಮ ಅಧಿಕೃತ ಟ್ವಟರ್​ ಖಾತೆಯ ಮೂಲಕ ಸಿದ್ದರಾಮಯ್ಯ ಅವರು ಬರೆದುಕೊಂಡಿದ್ದು, ಉದ್ಯಮಗಳು ಮುಚ್ಚಿವೆ, ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅಕ್ಷರಶಃ ನಿರ್ಗತಿಕರಾಗಿದ್ದಾರೆ. ಮಾರುಕಟ್ಟೆಯಲ್ಲಿ ಹಣ್ಣು-ತರಕಾರಿ ಇಲ್ಲ, ರೈತರು ಬೆಳೆಯನ್ನು ಬೀದಿಗೆ ಚೆಲ್ಲುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತುರ್ತಾಗಿ ಗಮನಹರಿಸಬೇಕಾಗಿದೆ ಎಂದಿದ್ದಾರೆ.

ಕೋವಿಡ್-19 ವೈರಸ್ ನಿಂದ ಅಮೂಲ್ಯವಾದ ಜೀವದ ಜೊತೆ ಜೀವನವನ್ನೂ ಉಳಿಸುವುದಕ್ಕಾಗಿ ತಜ್ಞರು, ಉದ್ಯಮಿಗಳು, ಅಧಿಕಾರಿಗಳು ಮತ್ತು ಹಿರಿಯ ರಾಜಕೀಯ ನಾಯಕರನ್ನೊಳಗೊಂಡ ಕಾರ್ಯಪಡೆಯನ್ನು ತುರ್ತಾಗಿ ರಚಿಸಬೇಕೆಂದು ಸಿಎಂ ಅವರನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Also read:  'ಜನರಿಗಷ್ಟೇ ಅಲ್ಲ ಮಾತು ಬಾರದ ಮೃಗಾಲಯ ಪ್ರಾಣಿಗೂ ಸಹಾಯ ಮಾಡಿದ್ದಾರೆ'

Latest article