ಹಾವೇರಿ: ಜನರು ನನ್ನ ಮುಖ ನೋಡಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿದ್ದು, ಇವಾಗ ಬಿಜೆಪಿ ಪಕ್ಷಕ್ಕೆ ಬಂದಿದ್ದರಿಂದ ಯುವಕರಿಂದ ಅಭೂತ ಪೂರ್ವ ಬೆಂಬಲ ಸಿಕ್ಕಿದೆ ಎಂದು ಸೋಮವಾರ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಹಿರೇಕೆರೂರಿನ ದುರ್ಗಾದೇವಿ ದೇವಸ್ಥಾನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆದ್ದಿತ್ತು ಎಂದರೇ ಅದು ಬಿ.ಸಿ. ಪಾಟೀಲ್ನಿಂದ. ಜನರು ನನ್ನ ಮುಖ ನೋಡಿ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿದ್ದು ಎಂದು ಬಿ.ಸಿ.ಪಾಟೀಲ್ ತಿಳಿಸಿದರು.
ಇನ್ನ ಇದು ನನ್ನ ಐದನೇ ಚುನಾವಣೆ. ಪ್ರತಿ ಚುನಾವಣೆಯ ನಾಮಪತ್ರ ಸಲ್ಲಿಸುವುದಕ್ಕಿಂತ ಮುಂಚೆ ನಾನು ದುರ್ಗಾದೇವಿಗೆ ಪೂಜೆ ಸಲ್ಲಿಸುತ್ತೆನೆ. ನಾಮ ಪತ್ರವನ್ನು ತಾಯಿಯ ಮುಂದೆ ಇಟ್ಟು ಅನುಗ್ರಹ ಪಡೆದು ನಾಮಪತ್ರ ಸಲ್ಲಿಸುತ್ತೆನೆ ಎಂದು ತಿಳಿಸಿದರು.
ಕಬ್ಬಿಣಕಂತಿ ಮಠದ ಸ್ವಾಮೀಜಿ ಜೆಡಿಎಸ್ ನಿಂದ ಸ್ಪರ್ಧಿಸುವುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಚುನಾವಣೆ ಸ್ಪರ್ಧೆಯಲ್ಲಿದ್ದೆನೆ ಎಂದರೆ ಗೆದ್ದೆ ಗೆಲ್ಲುತ್ತೆನೆ. ನಾನು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯ್ಯಿ, ಶಿವಕುಮಾರ ಉದಾಸಿ, ಯು.ಬಿ.ಬಣಕಾರ ಭಾಗಿಯಾಗುತ್ತಾರೆ. ಹಿರೆಕೇರೂರುನಲ್ಲಿ ಯು. ಬಿ. ಬಣಕಾರ ಮತ್ತು ಬಿ.ಸಿ. ಪಾಟೀಲ್ ಎರಡು ಶಕ್ತಿ ಇದ್ದ ಹಾಗೆ. ಎರಡು ಶಕ್ತಿ ಇವಾಗ ಒಂದಾಗಿವೆ, ಗೆಲುವು ನಿಶ್ಚಿತ ಎಂದು ಬಿ.ಸಿ. ಪಾಟೀಲ್ ಗೆಲುವಿನ ಶ್ವಾಸ ವ್ಯಕ್ತಪಡಿಸಿದರು.