Tuesday, August 16, 2022

ಚೆನ್ನೈನಲ್ಲಿ ಕೊರೊನಾ ಕೇಸ್ ಪ್ರಮಾಣ ಕಡಿಮೆಯಾದ್ರಷ್ಟೇ ಕನ್ನಡ ಸಿನಿಮಾ ರಿಲೀಸ್ ..?!

Must read

70-80 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹಿಂದೆಂದೂ ತಿಂಗಳುಗಟ್ಟಲೇ ಸಿನಿಮಾ ಪ್ರದರ್ಶನ ನಿಂತಿರಲಿಲ್ಲ. ಚೆನ್ನೈನಲ್ಲಿ ಡೆಡ್ಲಿ ವೈರಸ್ ನಿಯಂತ್ರಣಕ್ಕೆ ಬಾರದ ಹೊರತು ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನ ಸಾಧ್ಯವಿಲ್ಲ ಅನ್ನಲಾಗ್ತಿದೆ.

ಕನ್ನಡದ ಬಹುನಿರೀಕ್ಷಿತ ಸಿನಿಮಾಗಳೆಲ್ಲಾ ಸಮ್ಮರ್ನಲ್ಲೇ ಬರ್ಬೇಕಿತ್ತು. ಕೊರೊನಾ ಹೊಡೆತದಿಂದ ಸಮ್ಮರ್ ಸ್ಯಾಂಡಲ್ವುಡ್ಗೆ ಅದೃಷ್ಟ ತಂದುಕೊಡಲೇಯಿಲ್ಲ.

ಕನ್ನಡ ಸಿನಿಮಾ ರಿಲೀಸ್ಗೂ ಚೆನ್ನೈಗೂ ಇದ್ಯಾ ಲಿಂಕ್..?

ಚೆನ್ನೈ ವೈರಸ್ ಮುಕ್ತವಾದ್ರೆ ಮಾತ್ರ ಕನ್ನಡ ಚಿತ್ರ ರಿಲೀಸ್..?

ಕರ್ನಾಟಕದಲ್ಲಿ ಮತ್ತೆ ಸಿನಿಮಾ ಪ್ರದರ್ಶನ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ. ಕರ್ನಾಟಕದಲ್ಲಿ ಕೊರೊನಾ ಹಾವಳಿ ಕಮ್ಮಿಯಾದ್ರೆ, ಸಿನಿಮಾ ರಿಲೀಸ್ ಆಗುತ್ತೆ ಅಂದುಕೊಂಡ್ರೆ ತಪ್ಪಾಗತ್ತೆ. ಯಾಕಂದ್ರೆ, ಪಕ್ಕದ ಚೆನ್ನೈನಲ್ಲಿ ಕೊರೊನಾ ಸಂಪೂರ್ಣವಾಗಿ ನಿಯಂತ್ರಣವಾಗದ ಹೊರತು ರಾಜ್ಯದಲ್ಲಿ ಸಿನಿಮಾ ರಿಲೀಸ್ ಕಷ್ಟ ಕಷ್ಟ. ಕನ್ನಡ ಸಿನಿಮಾ ರಿಲೀಸ್ಗೆ ನಾವು ಇನ್ನು ಚೆನ್ನೈನಲ್ಲಿರೋ ಯುಎಫ್ಓ-ಕ್ಯೂಬ್ ಸ್ಟುಡಿಯೋಗಳನ್ನ ನೆಚ್ಚಿಕೊಂಡಿರೋದೇ ಇದಕ್ಕೆಲ್ಲಾ ಕಾರಣ.

ಕರ್ನಾಟಕದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆಗ್ಬೇಕು ಅಂದ್ರು, ಮೊದ್ಲು ಚೆನ್ನೈನಲ್ಲಿರೋ ಯುಎಫ್ಓ-ಕ್ಯೂಬ್ ಸ್ಟುಡಿಯೋಗಳಿಂದ ಸಿನಿಮಾ ಅಪ್ಲೋಡ್ ಆಗಬೇಕು. ಚೆನ್ನೈನಲ್ಲಿ ಕೊರೊನಾ ಹಾವಳಿ ಜೋರಾಗಿದೆ. ಅಲ್ಲಿ ವೈರಸ್ ನಿಯಂತ್ರಣಕ್ಕೆ ಬರದ ಹೊರತು ಸ್ಟುಡಿಯೋಗಳು ಕಾರ್ಯನಿರ್ವಹಿಸೋದಿಲ್ಲ. ಸ್ಟುಡಿಯೋಗಳು ಕಾರ್ಯನಿರ್ವಹಿಸದಿದ್ರೆ, ಸಿನಿಮಾ ಪ್ರದರ್ಶನ ಸಾಧ್ಯವಿಲ್ಲ. ಹಾಗಾಗಿ ಕರ್ನಾಟಕದಲ್ಲಿ ಯಾವಾಗ ಸಿನಿಮಾ ಪ್ರದರ್ಶನ ಶುರುವಾಗುತ್ತೆ ಅನ್ನೋದೇ ಅರ್ಥವಾಗ್ತಿಲ್ಲ.

ನಾಣಿ.. ಎಂಟ್ರಟ್ರೈನ್ಮೆಂಟ್ ಬ್ಯೂರೋ, ಟಿವಿ5

Latest article