ನವದೆಹಲಿ: ಚೀನಾದ ಟಿಕ್ಟಾಕ್, ಶೇರ್ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್ ಮತ್ತು ವಿ–ಚಾಟ್ ಸೇರಿದಂತೆ 59 ಮೊಬೈಲ್ ಆ್ಯಪ್ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ದೇಶದ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುತಿದ್ದ ಕಾರಣ ಆ್ಯಪ್ಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
‘ಆ್ಯಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ಫಾರ್ಮ್ನಲ್ಲಿ ಇರುವ ಈ ಆ್ಯಪ್ಗಳ ಸರ್ವರ್ಗಳು ವಿದೇಶದಲ್ಲಿ ಇವೆ. ಈ ಆ್ಯಪ್ಗಳು ದತ್ತಾಂಶ ಸಂಗ್ರಹ, ಬಳಕೆದಾರರ ಪ್ರೊಫೈಲಿಂಗ್ ಮಾಡಿ ಅವನ್ನು ಅನಧಿಕೃತವಾಗಿ ಸರ್ವರ್ಗಳಿಗೆ ರವಾನಿಸುತ್ತಿದ್ದವು. ಅಲ್ಲದೆ, ಜನರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದವು. ಈ ಸಂಬಂಧ ಹಲವು ದೂರುಗಳು ಬಂದಿದ್ದವು. ಇದು ಅತ್ಯಂತ ಕಳವಳದ ವಿಚಾರವಾಗಿತ್ತು. ಹೀಗಾಗಿ ಈ ಆ್ಯಪ್ಗಳನ್ನು ನಿಷೇಧಿಸಲಾಗಿದೆ’ ಎಂದು ಸಚಿವಾಲಯವು ತಿಳಿಸಿದೆ.
ನಿಷೇಧವಾಗಿರುವ ಆ್ಯಪ್ಗಳ ಪಟ್ಟಿ ಇಲ್ಲಿದೆ:
ಟಿಕ್ ಟಾಕ್, ಶೇರ್ ಇಟ್, ಕ್ವಾಯ್ (Kwai), ಯುಸಿ ಬ್ರೌಸರ್, ಬೈಡು, ಶೇನ್, ಕ್ಲಾಶ್ ಆಫ್ ಕಿಂಗ್ಸ್, ಡಿಯು ಬ್ಯಾಟರಿ ಸೇವರ್, ಹೆಲೊ, ಲೈಕೀ, ಯುಕ್ಯಾಮ್ ಮೇಕ್ಅಪ್, ಎಂಐ ಕಮ್ಯೂನಿಟಿ, ಸಿಎಂ ಬ್ರೊವರ್ಸ್, ವೈರಸ್ ಕ್ಲೀನರ್, ಎಪಿಯುಎಸ್ ಬ್ರೌಸರ್, ರೋಮ್ವಿ, ಕ್ಲಬ್ ಫ್ಯಾಕ್ಟರಿ, ನ್ಯೂಸ್ ಡಾಗ್, ಬ್ಯೂಟಿ ಪ್ಲಸ್, ವಿ ಚಾಟ್, ಯುಸಿ ನ್ಯೂಸ್, ಕ್ಯುಕ್ಯು ಮೇಲ್, ವೆಬಿಯೊ, ಕ್ಸೆಂಡರ್, ಕ್ಯುಕ್ಯು ಮ್ಯೂಸಿಕ್, ಕ್ಯುಕ್ಯು ನ್ಯೂಸ್ಫೀಡ್, ಬಿಗೊ ಲೈವ್, ಸೆಲ್ಫಿ ಸಿಟಿ, ಮೇಲ್ ಮಾಸ್ಟರ್, ಪ್ಯಾರಲಲ್ ಸ್ಪೇಸ್, ವಿಗೊ ವಿಡಿಯೊ, ನ್ಯೂ ವಿಡಿಯೊ ಸ್ಟೇಟಸ್, ಎಂಐ ವಿಡಿಯೊ ಕಾಲ್ – ಶಿಯಾಮಿ, ವಿಸಿಂಕ್, ಇಎಸ್ ಫೈಲ್ ಎಕ್ಸ್ಪ್ಲೋರರ್, ವಿವೊ ವಿಡಿಯೊ – ಕ್ಯುಯು ವಿಡಿಯೊ ಕಂಪನಿ, ಮೇಟು (Meitu), ಡಿಯು ರೆಕಾರ್ಡರ್, ವಾಲ್ಟ್ – ಹೈಡ್, ಕ್ಯಾಷ್ (Cache) ಕ್ಲೀನರ್ ಡಿಯು ಆಪ್ ಸ್ಟುಡಿಯೊ, ಡಿಯು ಕ್ಲೀನರ್, ಡಿಯು ಬ್ರೌಸರ್, ಹಗೊ ಪ್ಲೇ ವಿತ್ ನ್ಯೂ ಫ್ರೆಂಡ್ಸ್, ಕ್ಯಾಮ್ ಸ್ಕಾನರ್, ಕ್ಲೀನ್ ಮಾಸ್ಟರ್ – ಚೀತಾ ಮೊಬೈಲ್, ವಂಡರ್ ಕ್ಯಾಮೆರಾ, ಫೋಟೊ ವಂಡರ್, ಕ್ಯುಕ್ಯು ಪ್ಲೇಯರ್, ವಿ ಮೀಟ್, ಸ್ವೀಟ್ ಸೆಲ್ಫಿ, ಬೈಡು ಟ್ರಾನ್ಸ್ಲೇಟ್, ವಿಮೇಟ್, ಕ್ಯುಕ್ಯು ಇಂಟರ್ನ್ಯಾಷನಲ್, ಕ್ಯುಕ್ಯು ಸೆಕ್ಯುರಿಟಿ ಸೆಂಟರ್, ಕ್ಯುಕ್ಯು ಲಾಂಚರ್, ಯು ವಿಡಿಯೊ, ವಿ ಫ್ಲೈ ಸ್ಟೇಟಸ್ ವಿಡಿಯೊ, ಮೊಬೈಲ್ ಲೆಜೆಂಡ್ಸ್, ಡಿಯು ಪ್ರೈವಸಿ.
Government of India bans 59 mobile apps. Tik Tok, UC Browser and other Chinese apps included in the list. pic.twitter.com/RZyZ9FsAsc
— ANI (@ANI) June 29, 2020
ಲ