ಹಾಸನ: ಇಷ್ಟು ದಿನ ಗ್ರೀನ್ ಜೋನ್ನಲ್ಲಿದ್ದ ಹಾಸನಕ್ಕೆ ಕೊರೊನಾ ಎಂಟ್ರಿ ಕೊಟ್ಟಿದ್ದು, ಪ್ರಯಾಣಿಕರು ಮುಂಬೈನಿಂದ ಹಾಸನಕ್ಕೆ ಬಂದ ಬಗ್ಗೆ ಮಾಹಿತಿ ಸಿಕ್ಕಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಐವರು ಪೊಲೀಸ್ ಇಲಾಖೆಯ ಸೇವಾ ಸಿಂಧೂ ಪಾಸ್ ಪಡೆದು ಮುಂಬಯಿಂದ ಪ್ರಯಾಣ ಬೆಳೆಸಿದ್ದಾರೆ. ಮುಂಬಯಿಯಿಂದ ಹಿಂದಿರುಗಿದಾಗ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ಪರಿಶೀಲನೆ ನಡೆಸಿದಾಗ ಸೊಂಕಿರುವುದು ದೃಢವಾಗಿದೆ .
ಐವರು ಖಾಸಗಿ ಕಾರ್ ಮಾಡಿಕೊಂಡು ಮುಂಬಯಿಂದ ಬಂದಿದ್ದಾರೆ. ಬಂದ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲಾಗಿದೆ. ಕಾರ್ ಚಾಲಕನ ಬಗ್ಗೆ ಮಾಹಿತಿಯಿಲ್ಲ. ಕಾರ್ ಚಾಲಕ ಸೇರಿ ಆರು ಜನ ಕಾರ್ನಲ್ಲಿ ಬಂದಿದ್ದಾರೆ. ಕಾರ್ ಚಾಲಕನ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಿರೀಶ್ ಮಾಹಿತಿ ನೀಡಿದ್ದಾರೆ.