ಹಾವೇರಿ: ನನಗೆ ಯಾರಿಂದಲೂ ಯಾವುದೇ ರಾಜಕೀಯ ಒತ್ತಡವಿಲ್ಲ. ನಾವು ಗುರುಪರಂಪರೆಯಿಂದ ಬಂದವರು ಗುರುಗಳ ಮಾತಿನಿಂದ ಉಪಚುನಾವಣೆಯ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದು ಹಿರೇಕೆರೂರು ಜೆಡಿಎಸ್ ಅಭ್ಯರ್ಥಿ ರಟ್ಟಿಹಳ್ಳಿಯ ಕಬ್ಬಿಣಕಂತಿ ಮಠದ ಶಿವಲಿಂಗಾ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿಂದು ಮಾದ್ಯಮದೊಂದಿಗೆ ಮಾತನಾಡಿದ ಅವರು, ನಮ್ಮ ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ, ರಸ್ತೆ ಸರಿ ಇಲ್ಲ, ಕೆರೆಗಳು ಒಣಗುತ್ತಿವೆ. ಜನಸಾಮಾನ್ಯರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಜನರ ಸಮಸ್ಯೆಯನ್ನು ಸರಿಪಡಿಸಲು ರಾಜಕೀಯಕ್ಕೆ ಬಂದಿದ್ದೆ ಎಂದರು.
ಆದರೆ, ಪಂಚಪೀಠದ ಗುರುಗಳ ಮಾತಿನಿಂದ ಹಿಂದೆ ಸರಿದಿದ್ದೇನೆಯೇ ಹೊರತು ಯಾವುದೇ ರಾಜಕೀಯ ಒತ್ತಡದಿಂದಲ್ಲ ಹಿಂದೆ ಸರಿದಿಲ್ಲ. ನಾಳೆ ನಾಮಪತ್ರ ವಾಪಸ್ ಪಡೆಯಲಿದ್ದು, ಸರ್ಕಾರದ ಪ್ರತಿನಿಧಿಯಾಗಿ ಬಂದ ಬಿ.ವೈ ರಾಘವೇಂದ್ರ ಅವರ ಬಳಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ, ಸೋಲು-ಗೆಲುವಿನ ಬಳಿಕವೂ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಮನಸ್ಸು ಮಾಡದಿದ್ದರೆ ಮತ್ತೆ ರಾಜಕೀಯಕ್ಕೆ ಬರುವುದಾಗಿ ಎಚ್ಚರಿಸಿದ್ದಾರೆ.