Tuesday, August 16, 2022

ಗೀತಾ ಚಿತ್ರದ ಮೊದಲ ವಾರದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ..?

Must read

ವಿಜಯ್​ ನಾಗೇಂದ್ರ ನಿರ್ದೇಶನದಲ್ಲಿ ಗೋಲ್ಡನ್​ ಸ್ಟಾರ್ ಗಣೇಶ್​​ ಅಭಿನಯದ ರೊಮ್ಯಾಂಟಿಕ್ ಆ್ಯಕ್ಷನ್​ ಸಿನಿಮಾ ಗೀತಾ ಎರಡನೇ ವಾರ ಭರ್ಜರಿ ಪ್ರದರ್ಶನ ಕಾಣ್ತಿದೆ. ಪರಭಾಷಾ ಸಿನಿಮಾಗಳ ಹಾವಳಿ ನಡುವೆಯೂ ಆ್ಯಂಗ್ರಿ ಯಂಗ್​ಮ್ಯಾನ್ ಅವತಾರದಲ್ಲಿ ಮಳೆ ಹುಡುಗನ ಆರ್ಭಟಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ.

80ರ ದಶಕದ ಕನ್ನಡ ಹೋರಾಟಗಾರ ಮತ್ತು ರೊಮ್ಯಾಂಟಿಕ್​ ಬಾಯ್​, ಹೀಗೆ ಎರಡು ಶೇಡ್​ಗಳಿರೋ ಎರಡು ವಿಭಿನ್ನ ಪಾತ್ರಗಳನ್ನ ಗೋಲ್ಡನ್​ ಸ್ಟಾರ್ ಗಣೇಶ್ ನಟಿಸಿರೋ ಸಿನಿಮಾ ಗೀತಾ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ವಿಜಯ್ ನಾಗೇಂದ್ರ, ಗೋಕಾಕ್​ ಚಳುವಳಿಯ ಜೊತೆಗೆ ಒಂದು ಸೊಗಸಾದ ಲವ್​ ಸ್ಟೋರಿ ಹೇಳಿ ಸಕ್ಸಸ್ ಕಂಡಿದ್ದಾರೆ. ಗೀತಾ ಸಿನಿಮಾ ಎರಡನೇ ವಾರ ಭರ್ಜರಿ ಪ್ರದರ್ಶನ ಕಾಣ್ತಿದೆ.

ಕನ್ನಡ ಕಟ್ಟಾಳು ಶಂಕರನ ಅಭಿನಯಕ್ಕೆ ಪ್ರೇಕ್ಷಕರು ಫಿದಾ ​

ಮೊದಲ ವಾರವೇ 5 ಕೋಟಿ ಕಲೆಕ್ಷನ್ ಮಾಡಿದ ಗೀತಾ..!

ಸಯ್ಯದ್​ ಸಲಾಂ ಮತ್ತು ಶಿಲ್ಪಾ ಗಣೇಶ್​ ಜಂಟಿಯಾಗಿ ನಿರ್ಮಿಸಿರೋ ಗೀತಾ ಸಿನಿಮಾ ಮೊದಲ ವಾರವೇ 5 ಕೋಟಿ ಕಲೆಕ್ಷನ್ ಮಾಡಿ ಸೌಂಡ್ ಮಾಡ್ತಿದೆ. ಗಣೇಶ್​​ ಜೊತೆಗೆ ನಾಯಕಿಯರಾಗಿ ಶಾನ್ವಿ ಶ್ರೀವಾಸ್ತವ್, ಪಾರ್ವತಿ, ಪ್ರಯಾಗ ಮಾರ್ಟಿನ್ ನಟಿಸಿದ್ದು, ಡೈನಾಮಿಕ್​​ ದೇವರಾಜ್​, ಸುಧಾರಾಣಿ, ರಂಗಾಯಣ ರಘು ಸೇರಿದಂತೆ ಅನುಭವಿ ಕಲಾವಿದರ ದಂಡು ಚಿತ್ರದಲ್ಲಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ, ಸಿನಿಮಾವನ್ನ ಗೆಲ್ಲಿಸಿದ ಪ್ರೇಕ್ಷಕರಿಗೆ ಚಿತ್ರತಂಡ ಧನ್ಯವಾದ ತಿಳಿಸಿತು.

ತಮ್ಮ ಇಮೇಜನ್ನು ಬಿಡದೇ ಪ್ರಯೋಗಾತ್ಮಕ ಸಿನಿಮಾ ಮಾಡಿ ಗಣೇಶ್​ ಸಕ್ಸಸ್ ಕಂಡಿದ್ದಾರೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ವಿಜಯ್ ನಾಗೇಂದ್ರ ಭರವಸೆ ಮೂಡಿಸಿದ್ದಾರೆ.

ತಮಗೆ ತಿಳಿಸದೇ ಚಿತ್ರದ ಹಾಡೊಂದನ್ನ ಚಿತ್ರತಂಡ ಕಟ್​ ಮಾಡಿದೆ, ಅಂತ ನಟಿ ಶಾನ್ವಿ ಶ್ರೀವಾಸ್ತವ್​ ಬೇಸರ ವ್ಯಕ್ತಪಡಿಸಿದ್ರು. ಸೋಷಿಯಲ್​ ಮೀಡಿಯಾದಲ್ಲಿ ಪತ್ರ ಬರೆದು ನೋವು ತೋಡಿಕೊಂಡಿದ್ರು. ಸಿನಿಮಾ ಕಾಲಾವಧಿ ಜಾಸ್ತಿಯಾಗುತ್ತೆ ಅನ್ನೋ ಕಾರಣಕ್ಕೆ ಹಾಡನ್ನ ಕತ್ತರಿಸಲಾಯ್ತು ಅಂತ ಚಿತ್ರತಂಡ ಹೇಳಿದ್ದು, ಇದೀಗ ಶಾನ್ವಿ ಮತ್ತೆ ಪತ್ರ ಬರೆದು ಈ ವಿವಾದಕ್ಕೆ ಅಂತ್ಯ ಹಾಡಿದ್ದಾರೆ.

ಒಟ್ಟಾರೆ ಗೋಲ್ಡನ್​ ಸ್ಟಾರ್ ಗಣೇಶ್​ ಅಭಿನಯದ ಗೀತಾ ಸಿನಿಮಾ ಪ್ರೇಕ್ಷಕರ ಮನ ಗೆದ್ದಿದ್ದು, ಸಿನಿಮಾ ಮೂರನೇ ವಾರದತ್ತ ಸಾಗಿದೆ. ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದ್ದು, ಇಂತಹ ಮತ್ತಷ್ಟು ಸಿನಿಮಾಗಳಿಗೆ ಗೀತಾ ಪ್ರೇರಣೆಯಾಗಿದೆ.

Also read:  ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ: 22 ಶಾಲೆಗಳಿಗೆ ಇಂದು ರಜೆ ಘೋಷಣೆ

ನಾಣಿ.. ಎಂಟ್ರಟ್ರೈನ್​ಮೆಂಟ್ ಬ್ಯೂರೋ, ಟಿವಿ5

Latest article