Wednesday, May 18, 2022

ಕೊಹ್ಲಿ ಹುಟ್ಟುಹಬ್ಬಕ್ಕೆ ವಿಷ್ ಮಾಡಿ, ಮುಂದಿನ ಸಲ ಕಪ್ ನಮ್ದೆ ಎಂದ ಎಬಿಡಿ ವಿಲಿಯರ್ಸ್.!

Must read

ಬೆಂಗಳೂರು: ಕೊಹ್ಲಿ ಹುಟ್ಟುಹಬ್ಬಕ್ಕೆ ಮಿಸ್ಟರ್ 360 ಎಬಿಡಿ ವಿಲಿಯರ್ಸ್ ವಿಷ್ ಮಾಡಿದ್ದಾರೆ. ವಿಡಿಯೋ ಮೂಲಕ ವಿಷ್ ಮಾಡಿರುವ ಎಬಿಡಿ ಮುಂದಿನ ಸಲ ಕಪ್ ನಮ್ದೆ ನಿಮ್ಮ ಜೊತೆಗೆ ನಾನಿರುತ್ತೇನೆ ಎಂದಿದ್ದಾರೆ.

ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ತುಂಬ ಆ್ಯಕ್ಟೀವ್ ಆಗಿರುವ ತಂಡದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರು ಕೊಹ್ಲಿಗೆ ಮುಂದಿನ ದಿನಗಳಲ್ಲಿ A F5 ಬಟನ್​ನಂತೆ ನಿಮ್ಮ ಬ್ಯಾಟಿಂಗ್ ಇರಲಿ ಎಂದು ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಂಡವನ್ನು ಇದೇ ಪ್ಯಾಶನ್​ನಲ್ಲಿ ಮುನ್ನಡೆಸಿ ಎಂದು ಶುಭಾಶಯ ತಿಳಿಸಿದ್ದಾರೆ. ಅಲ್ಲದೇ ಯಜುವೇಂದ್ರ ಚಹಲ್, ಉಮೇಶ್ ಯಾದವ್, ಹಿಟ್​ಮ್ಯಾನ್ ರೋಹಿತ್ ಶರ್ಮಾ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಒಟ್ಟಾರೆ ವಿರಾಟ್​ ಕೊಹ್ಲಿಯ 31 ವಸಂತವನ್ನು ಎಲ್ಲ ಕ್ರಿಕೆಟಿಗರು ಭರ್ಜರಿಯಾಗಿ ತಮ್ಮದೇ ಸ್ಟೈಲ್​ನಲ್ಲಿ ವಿಷ್ ಮಾಡಿದ್ದಾರೆ.

Latest article